ಭಾರತವು 11 ವರ್ಷಗಳ ಪರಿವರ್ತನಾಶೀಲ ಆಡಳಿತವನ್ನು ಆಚರಿಸುತ್ತಿರುವ ಈ ಕ್ಷಣವು ಕೇವಲ ಒಂದು ಮೈಲಿಗಲ್ಲಿಗಿಂತ ಹೆಚ್ಚಿನದನ್ನು ಸೂಚಿಸುತ್ತದೆ – ಇದು ವಿಕಸಿತ ಭಾರತವನ್ನು ರೂಪಿಸುವಲ್ಲಿ ರಾಷ್ಟ್ರದ ಗಮನಾರ್ಹ ಪ್ರಯಾಣದ ಆಚರಣೆಯಾಗಿದೆ. ಕಳೆದ ದಶಕದಲ್ಲಿ ಸರ್ಕಾರವು ಸ್ವಾವಲಂಬಿ ಮತ್ತು ಸಬಲೀಕೃತ ರಾಷ್ಟ್ರವನ್ನು ನಿರ್ಮಿಸುವ ದೃಷ್ಟಿಕೋನದೊಂದಿಗೆ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ, ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣದಂತಹ ಕ್ಷೇತ್ರಗಳಲ್ಲಿ- ಪ್ರಮುಖ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ನಡೆಸಿದೆ.
ವಿಕಸಿತ ಭಾರತ್ 2025 ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಭಾರತದ ಅಭಿವೃದ್ಧಿ ಪ್ರಯಾಣದ ಬಗ್ಗೆ ತಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು ಪರೀಕ್ಷಿಸಲು ಎಲ್ಲಾ ನಾಗರಿಕರನ್ನು ಮೈಗವ್ ಆಹ್ವಾನಿಸುತ್ತದೆ ಈ ರಸಪ್ರಶ್ನೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮತ್ತು ಭಾರತದ ಭವಿಷ್ಯವನ್ನು ರೂಪಿಸುತ್ತಿರುವ ಸಾಮೂಹಿಕ ಸಾಧನೆಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ.
ಬಹುಮಾನ:
1. ರಸಪ್ರಶ್ನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ₹ 1,00,000/- ನಗದು ಬಹುಮಾನ ನೀಡಲಾಗುವುದು.
2. ರಸಪ್ರಶ್ನೆಯಲ್ಲಿ ಎರಡನೇ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ₹ 75,000/- ನಗದು ಬಹುಮಾನ ನೀಡಲಾಗುವುದು.
3. ರಸಪ್ರಶ್ನೆಯಲ್ಲಿ ಮೂರನೇ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ₹ 50,000/- ನಗದು ಬಹುಮಾನ ನೀಡಲಾಗುವುದು.
4. ಮುಂದಿನ ಟಾಪ್ 100 ಸ್ಪರ್ಧಿಗಳಿಗೆ ತಲಾ ₹ 2,000/- ಸಮಾಧಾನಕರ ಬಹುಮಾನ ನೀಡಲಾಗುವುದು.
5.ಹೆಚ್ಚುವರಿಯಾಗಿ, ಮುಂದಿನ ಟಾಪ್ 200 ಸ್ಪರ್ಧಿಗಳಿಗೆ ತಲಾ ₹1,000/- ರ ಸಮಾಧಾನಕರ ಬಹುಮಾನ ನೀಡಲಾಗುವುದು.
6. ಭಾಗವಹಿಸುವ ಎಲ್ಲರಿಗೂ ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುವುದು.
1. ರಸಪ್ರಶ್ನೆ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.
2. ಭಾಗವಹಿಸುವವರು ‘ಪ್ಲೇ ಕ್ವಿಜ್’ ಮೇಲೆ ಕ್ಲಿಕ್ ಮಾಡಿದ ತಕ್ಷಣ ರಸಪ್ರಶ್ನೆ ಪ್ರಾರಂಭವಾಗುತ್ತದೆ.
3. ಇದು 330 ಸೆಕೆಂಡುಗಳಲ್ಲಿ 11 ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಮಯೋಚಿತ ರಸಪ್ರಶ್ನೆಯಾಗಿದೆ. ಇಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.
4. ಭಾಗವಹಿಸುವವರು ತಮ್ಮ ಮೈಗವ್ ಪ್ರೊಫೈಲ್ ಅನ್ನು ಹೆಚ್ಚಿನ ಸಂವಹನಕ್ಕಾಗಿ ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಪೂರ್ಣ ಪ್ರೊಫೈಲ್ ಹೊಂದಿರುವವರು ವಿಜೇತರಾಗಲು ಅರ್ಹವಾಗುವುದಿಲ್ಲ.
5. ಪ್ರತಿ ಬಳಕೆದಾರರಿಗೆ ಒಂದೇ ಎಂಟ್ರಿ ಇರುತ್ತದೆ ಮತ್ತು ಒಮ್ಮೆ ಸಲ್ಲಿಸಿದ ಎಂಟ್ರಿಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಒಬ್ಬರೇ ಭಾಗವಹಿಸುವವರು/ಇ-ಮೇಲ್ ಐಡಿ/ಮೊಬೈಲ್ ಸಂಖ್ಯೆಯಿಂದ ಅನೇಕ ಎಂಟ್ರಿ ಗಳನ್ನು ಸ್ವೀಕರಿಸಲಾಗುವುದಿಲ್ಲ.
6. ಮೈಗವ್ ಉದ್ಯೋಗಿಗಳು ಅಥವಾ ರಸಪ್ರಶ್ನೆಯ ನಡೆಸಿಕೊಡುವವರ (ಹೋಸ್ಟ್) ಜೊತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರುವ ಉದ್ಯೋಗಿಗಳು ರಸಪ್ರಶ್ನೆಯಲ್ಲಿ ಭಾಗವಹಿಸಲು ಅರ್ಹರಲ್ಲ. ಈ ಅನರ್ಹತೆಯು ಅವರ ಹತ್ತಿರದ ಕುಟುಂಬ ಸದಸ್ಯರಿಗೂ ಅನ್ವಯಿಸುತ್ತದೆ.
7. ಹೆಚ್ಚಿನ ಭಾಗವಹಿಸುವಿಕೆ ಮತ್ತು ನ್ಯಾಯಸಮ್ಮತತೆಯನ್ನು ಉತ್ತೇಜಿಸಲು, ಪ್ರತಿ ಕುಟುಂಬಕ್ಕೆ ಒಬ್ಬ ವಿಜೇತ ಮಾತ್ರ ಬಹುಮಾನಕ್ಕೆ ಅರ್ಹರಾಗಿರುತ್ತಾರೆ.
8. ಯಾವುದೇ ಭಾಗವಹಿಸುವವರ ಭಾಗವಹಿಸುವಿಕೆ ಅಥವಾ ಸಹಭಾಗಿತ್ವವು ರಸಪ್ರಶ್ನೆಗೆ ಹಾನಿಕಾರಕವೆಂದು ಪರಿಗಣಿಸಿದರೆ, ಅವರನ್ನು ಅನರ್ಹಗೊಳಿಸುವ ಅಥವಾ ನಿರಾಕರಿಸುವ ಎಲ್ಲಾ ಹಕ್ಕುಗಳನ್ನು ಮೈಗವ್ ಕಾಯ್ದಿರಿಸಿದೆ. ಸ್ವೀಕರಿಸಿದ ಮಾಹಿತಿಯು ಅಸ್ಪಷ್ಟವಾಗಿದ್ದರೆ, ಅಪೂರ್ಣವಾಗಿದ್ದರೆ, ಹಾನಿಗೊಳಗಾಗಿದ್ದರೆ, ಸುಳ್ಳಾಗಿದ್ದರೆ ಅಥವಾ ತಪ್ಪಾಗಿದ್ದರೆ ಭಾಗವಹಿಸುವಿಕೆಯು ಅನೂರ್ಜಿತವಾಗಿರುತ್ತದೆ.
9. ಕಂಪ್ಯೂಟರ್ ದೋಷ ಅಥವಾ ಸಂಘಟಕರ ಸಮಂಜಸ ನಿಯಂತ್ರಣ ಮೀರಿದ ಯಾವುದೇ ದೋಷದಿಂದಾಗಿ ಕಳೆದುಹೋದ, ತಡವಾದ ಅಥವಾ ಅಪೂರ್ಣವಾದ ಅಥವಾ ರವಾನೆ ಆಗದ ನಮೂದುಗಳಿಗೆ (ಎಂಟ್ರಿ) ಸಂಘಟಕರು ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ.. ದಯವಿಟ್ಟು ಗಮನಿಸಿ, ಎಂಟ್ರಿ ಅನ್ನು ಸಲ್ಲಿಸಿದ ಪುರಾವೆಯು ಅದನ್ನು ಸ್ವೀಕರಿಸಿದ ಪುರಾವೆಯಲ್ಲ.
10. ಅನಿರೀಕ್ಷಿತ ಸಂದರ್ಭಗಳಲ್ಲಿ, ಸ್ಪರ್ಧೆಯ ನಿಯಮಗಳು ಮತ್ತು ನಿಬಂದನೆಗಳನ್ನು ಯಾವುದೇ ಸಮಯದಲ್ಲಿ ತಿದ್ದುಪಡಿ ಮಾಡುವ ಅಥವಾ ಪರಿಗಣಿಸಿದಂತೆ ಸ್ಪರ್ಧೆಯನ್ನು ರದ್ದುಗೊಳಿಸುವ ಹಕ್ಕನ್ನು ಮೈಗವ್ ಕಾಯ್ದಿರಿಸಿದೆ. ಸಂದೇಹ ನಿವಾರಣೆಗಾಗಿ ಈ ನಿಯಮಗಳು ಮತ್ತು ನಿಬಂದನೆಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಸಹ ಇದು ಒಳಗೊಂಡಿದೆ. ಭಾಗವಹಿಸುವವರು ಎಲ್ಲಾ ಅಪ್ಡೇಟ್ ಗಳಿಗಾಗಿ ವೆಬ್ಸೈಟ್ ಅನ್ನು ಪರಿಶೀಲಿಸಬೇಕು.
11. ರಸಪ್ರಶ್ನೆಯ ಕುರಿತು ಮೈಗವ್ ನ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ ಮತ್ತು ಅದರ ಕುರಿತು ಯಾವುದೇ ಪತ್ರವ್ಯವಹಾರವನ್ನು ನಮೂದಿಸಲಾಗುವುದಿಲ್ಲ.
12. ಎಲ್ಲಾ ವಿವಾದಗಳು/ ಕಾನೂನು ದೂರುಗಳು ದೆಹಲಿಯ ಅಧಿಕಾರ ವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಈ ಉದ್ದೇಶಕ್ಕಾಗಿ ಮಾಡಿದ ವೆಚ್ಚಗಳನ್ನು ಪಕ್ಷಗಳು ಸ್ವತಃ ಭರಿಸಬೇಕಾಗುತ್ತದೆ.
13. ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ, ಭಾಗವಹಿಸುವವರು ಯಾವುದೇ ತಿದ್ದುಪಡಿಗಳು ಅಥವಾ ಹೆಚ್ಚಿನ ಅಪ್ಡೇಟ್ ಗಳನ್ನು ಒಳಗೊಂಡಂತೆ ರಸಪ್ರಶ್ನೆ ಸ್ಪರ್ಧೆಯ ಎಲ್ಲಾ ನಿಯಮಗಳು ಮತ್ತು ನಿಬಂದನೆಗಳನ್ನು ಪಾಲಿಸಬೇಕು.
14. ಇನ್ನು ಮುಂದೆ ನಿಯಮಗಳು ಮತ್ತು ನಿಬಂದನೆಗಳು ಭಾರತೀಯ ಕಾನೂನುಗಳು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳಿಂದ ನಿಯಂತ್ರಿಸಲ್ಪಡುತ್ತವೆ.