GOVERNMENT OF INDIA
Accessibility
Accessibility Tools
Color Adjustment
Text Size
Navigation Adjustment
Screen Reader iconScreen Reader

The Viksit Bharat Quiz 2026 (Kannada)

Start Date : 13 Sep 2025, 4:00 pm
End Date : 31 Oct 2025, 11:45 pm
Closed
Quiz Closed

About Quiz

ವಿಕಸಿತ ಭಾರತ ರಸಪ್ರಶ್ನೆ 2026, ಭಾರತದ ಭವಿಷ್ಯವನ್ನು ರೂಪಿಸುತ್ತಿರುವ ಯುವಕರನ್ನು ತೊಡಗಿಸಲು ವಿಕಸಿತ ಭಾರತ ಯುವ ನಾಯಕರ ಸಂವಾದ (VBYLD) 2026 ಅಡಿಯಲ್ಲಿ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ. ಈ ರಸಪ್ರಶ್ನೆಯು ದೇಶದ ವಿವಿಧ ಅಂಶಗಳ ಬಗ್ಗೆ ಜ್ಞಾನ ಮತ್ತು ವಿಕಸಿತ ಭಾರತದ ಕಡೆಗೆ ನಿಮ್ಮ ದೃಷ್ಟಿಕೋನವನ್ನು ಪರೀಕ್ಷಿಸುತ್ತದೆ. ಇದು ಕುತೂಹಲವನ್ನು ಹುಟ್ಟುಹಾಕಲು, ತಿಳುವಳಿಕೆಯುಳ್ಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಗುರಿಯಾಗಿದೆ. ವಿಜೇತರು ಪ್ರಬಂಧ, ಪ್ರತಿಪಾದನೆಯಂತಹ ಇತ್ಯಾದಿ ಸುತ್ತುಗಳಿಗೆ ಮುನ್ನಡೆಯುತ್ತಾರೆ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು, ನಾಯಕತ್ವವನ್ನು ಪ್ರದರ್ಶಿಸಲು ಮತ್ತು ವಿಕಸಿತ ಭಾರತ @2047 ರ ದೃಷ್ಟಿಕೋನಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅವಕಾಶಗಳನ್ನು ಪಡೆಯುತ್ತಾರೆ.

 

ಪುರಸ್ಕಾರ-

 

ಟಾಪ್ 10,000 ವಿಜೇತರು ಉಚಿತ ಮೈ ಭಾರತ ಪುರಸ್ಕಾರ ಪಡೆಯುತ್ತಾರೆ.

 

ಪಾಲ್ಗೊಂಡ ಎಲ್ಲಾರಿಗೂ ಭಾಗವಹಿಸುವಿಕೆಯ ಇ-ಪ್ರಮಾಣಪತ್ರವನ್ನು ಪಡೆಯುತ್ತಾರೆ. 

Terms and Conditions

1. ರಸಪ್ರಶ್ನೆ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.  

2. ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕದ ಅಗತ್ಯವಿಲ್ಲ. 

3. ಸ್ಪರ್ಧಿಯು ‘ಪ್ಲೇ ಕ್ವಿಜ್’ ಮೇಲೆ ಕ್ಲಿಕ್ ಮಾಡಿದ ಕೂಡಲೇ ರಸಪ್ರಶ್ನೆ ಪ್ರಾರಂಭವಾಗುತ್ತದೆ.  

4. ಈ ರಸಪ್ರಶ್ನೆಯು ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರತಿ ಪ್ರಶ್ನೆಗೆ ಒಂದೇ ಒಂದು ಸರಿಯಾದ ಉತ್ತರದೊಂದಿಗೆ ಬಹು ಆಯ್ಕೆಗಳಿವೆ. 

5. ಒಬ್ಬರೇ ಸ್ಪರ್ಧಿ ಅನೇಕ ಲಾಗಿನ್ ಮೂಲಕ ಪಾಲ್ಗೊಳ್ಳುವ ಹಾಗಿಲ್ಲ.  

6. ರಸಪ್ರಶ್ನೆ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಮುಕ್ತವಾಗಿದೆ ಆದರೆ 15-29 ವಯಸ್ಸಿನ ಯುವಕರು ಮಾತ್ರ (ಸೆಪ್ಟೆಂಬರ್ 1, 2025 ರಂತೆ) ಮುಂದಿನ ಹಂತಗಳಲ್ಲಿ ಮುನ್ನಡೆಯಲು ಪರಿಗಣಿಸಲಾಗುತ್ತದೆ. 

7. ಇದು ಸಮಯ-ಮಿತಿಯ ರಸಪ್ರಶ್ನೆ: 20 ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ 600 ಸೆಕೆಂಡುಗಳ ಕಾಲಾವಕಾಶವಿರುತ್ತದೆ.  

8. ಕಂಪ್ಯೂಟರ್ ಆಧಾರಿತ ಲಾಟರಿ ವ್ಯವಸ್ಥೆಯ ಮೂಲಕ ಅತಿ ಹೆಚ್ಚು ಅಂಕ ಗಳಿಸಿದವರಿಂದ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.  

9. ಒಮ್ಮೆ ನಮೂದನ್ನು ಸಲ್ಲಿಸಿದ ನಂತರ, ಅದನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ.  

10. ಅಕಸ್ಮಾತ್ ಸಂಭವಿಸುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಸಂಘಟಕಕರು ಸ್ಪರ್ಧೆಯ ನೀತಿಗಳು ಮತ್ತು ಶರತ್ತುಗಳನ್ನು ಯಾವಾಗ ಬೇಕಾದರೂ ಬದಲಾಯಿಸಲು ಅಥವಾ ಸ್ಪರ್ಧೆಯನ್ನು ರದ್ದುಗೊಳಿಸಲು ಹಕ್ಕು ಹೊಂದಿದ್ದಾರೆ.  

11. ಸ್ಪರ್ಧಿಗಳು ಯಾವುದೇ ತಿದ್ದುಪಡಿಗಳು ಅಥವಾ ಹೆಚ್ಚಿನ ನವೀಕರಣಗಳು ಸೇರಿದಂತೆ ರಸಪ್ರಶ್ನೆ ಸ್ಪರ್ಧೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.  

12. ಆಯೋಜಕರ ರಸಪ್ರಶ್ನೆಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ ಮತ್ತು ಅದರ ಕುರಿತು ಯಾವುದೇ ಪತ್ರವ್ಯವಹಾರವನ್ನು ನಮೂದಿಸಲಾಗುವುದಿಲ್ಲ.  

13. ಎಲ್ಲಾ ವಿವಾದಗಳು / ಕಾನೂನಾತ್ಮಕ ದೂರುಗಳು ದೆಹಲಿಯ ನ್ಯಾಯವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಈ ಉದ್ದೇಶಕ್ಕಾಗಿ ಮಾಡಿದ ವೆಚ್ಚಗಳನ್ನು ಭಾಗವಹಿಸುವವರೇ ಸ್ವತಃ ಭರಿಸಬೇಕು.  

14. ಕಳೆದುಹೋದ, ತಡವಾಗಿ ಅಥವಾ ಅಪೂರ್ಣವಾಗಿರುವ ಅಥವಾ ಕಂಪ್ಯೂಟರ್ ದೋಷ ಅಥವಾ ಸಂಘಟಕರ ಸಮಂಜಸವಾದ ನಿಯಂತ್ರಣವನ್ನು ಮೀರಿದ ಯಾವುದೇ ಇತರ ದೋಷದಿಂದಾಗಿ ಪ್ರಸಾರವಾಗದ ನಮೂದುಗಳಿಗೆ ಸಂಘಟಕರು ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ನಮೂದನ್ನು ಸಲ್ಲಿಸುವ ಪುರಾವೆಯು ಅದನ್ನು ಸ್ವೀಕರಿಸಿದ ಪುರಾವೆಯಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.  

15. ಇನ್ನು ಮುಂದೆ ನಿಯಮಗಳು ಮತ್ತು ಷರತ್ತುಗಳು ಭಾರತೀಯ ಕಾನೂನುಗಳು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳಿಂದ ನಿಯಂತ್ರಿಸಲ್ಪಡುತ್ತವೆ.