GOVERNMENT OF INDIA
Accessibility
Accessibility Tools
Color Adjustment
Text Size
Navigation Adjustment
Screen Reader iconScreen Reader

Quiz on the Income Tax Act 2025 (Kannada)

Start Date : 20 Mar 2026, 5:00 pm
End Date : 20 Apr 2026, 11:45 pm
Closed
Quiz Banner
  • 10 Questions
  • 300 Seconds
Login to Play Quiz

About Quiz

1961 ಆದಾಯ ತೆರಿಗೆ ಕಾಯ್ದೆಯನ್ನು ಸ್ಪಷ್ಟ, ಸರಳ ಮತ್ತು ಹೆಚ್ಚು ಆಧುನಿಕ ಕಾನೂನಿನೊಂದಿಗೆ ಬದಲಾಯಿಸುವ ಮೂಲಕ ಆದಾಯ ತೆರಿಗೆ ಕಾಯ್ದೆ 2025 ಭಾರತದ ನೇರ ತೆರಿಗೆ ಚೌಕಟ್ಟಿನಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ. ಸಂಕೀರ್ಣತೆಯನ್ನು ಕಡಿಮೆ ಮಾಡಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಅನುಸರಣೆಯ ಸುಲಭತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಹೊಸ ಕಾಯಿದೆಯು ತೆರಿಗೆದಾರ ಸ್ನೇಹಿ ಮತ್ತು ತಂತ್ರಜ್ಞಾನಚಾಲಿತ ತೆರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯತ್ತ ದಾಪುಗಾಲಿಡುತ್ತಿದೆ.

ದಶಕಗಳ ತೆರಿಗೆ ಸುಧಾರಣೆಗಳ ಆಧಾರದ ಮೇಲೆ, ಭಾರತ ಸರ್ಕಾರವು ಆದಾಯ ತೆರಿಗೆ ಕಾಯ್ದೆ, 2025 ಅನ್ನು ಪರಿಚಯಿಸಿದೆ, ಇದು ನಾಗರಿಕರು, ವ್ಯವಹಾರಗಳು ಮತ್ತು ವೃತ್ತಿಪರರಿಗೆ ಆದಾಯ ತೆರಿಗೆ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಸುಲಭಗೊಳಿಸುತ್ತದೆ. ಹೊಸ ಶಾಸನವು ಸರಳೀಕರಣ, ನಿಬಂಧನೆಗಳ ಸ್ಪಷ್ಟತೆ ಮತ್ತು ಸುಧಾರಿತ ತೆರಿಗೆದಾರರ ಸೇವೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸ್ವಯಂಪ್ರೇರಿತ ಅನುಸರಣೆಯನ್ನು ಬಲಪಡಿಸುತ್ತದೆ.

ಪ್ರಮುಖ ಸುಧಾರಣೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಾಗರಿಕರು ಹೊಸ ತೆರಿಗೆ ಚೌಕಟ್ಟಿನಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು, ಆದಾಯ ತೆರಿಗೆ ಇಲಾಖೆಯು ಮೈಗವ್ ಸಹಯೋಗದೊಂದಿಗೆ ಆದಾಯ ತೆರಿಗೆ ಕಾಯ್ದೆ 2025 ರಸಪ್ರಶ್ನೆಯನ್ನು ಆಯೋಜಿಸುತ್ತಿದೆ.

ರಸಪ್ರಶ್ನೆಯು ನಾಗರಿಕರು, ವಿದ್ಯಾರ್ಥಿಗಳು, ವೃತ್ತಿಪರರು, ಉದ್ಯಮಿಗಳು ಮತ್ತು ತೆರಿಗೆದಾರರು ತಮ್ಮ ಜ್ಞಾನವನ್ನು ಪರೀಕ್ಷಿಸಲು, ಆದಾಯ ತೆರಿಗೆ ಕಾಯ್ದೆ, 2025 ಪ್ರಮುಖ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪಾರದರ್ಶಕ, ಪರಿಣಾಮಕಾರಿ ಮತ್ತು ನಾಗರಿಕ ಕೇಂದ್ರಿತ ತೆರಿಗೆ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಅದರ ಪಾತ್ರವನ್ನು ಪ್ರಶಂಸಿಸಲು ಅವಕಾಶವನ್ನು ಒದಗಿಸುತ್ತದೆ.

ರಸಪ್ರಶ್ನೆಯಲ್ಲಿ ಭಾಗವಹಿಸಿ, ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಿ ಮತ್ತು ಸರಳ, ಚುರುಕಾದ ಮತ್ತು ಹೆಚ್ಚು ಸ್ಫರ್ದಾತ್ಮಕವಾಗಿ ನೇರ ತೆರಿಗೆಯತ್ತ ಭಾರತದ ಪ್ರಯಾಣದ ಭಾಗವಾಗಿರಿ.

ಬಹುಮಾನ:

ಅಗ್ರ 10 ವಿಜೇತರು ತಲಾ 10,000 ನಗದು ಬಹುಮಾನವನ್ನು ಪಡೆಯುತ್ತಾರೆ.

ನಂತರದ 20 ವಿಜೇತರು ತಲಾ 5,000 ನಗದು ಬಹುಮಾನವನ್ನು ಪಡೆಯುತ್ತಾರೆ.

ನಂತರದ 50 ವಿಜೇತರು ತಲಾ 3,000 ನಗದು ಬಹುಮಾನವನ್ನು ಪಡೆಯುತ್ತಾರೆ.

ಭಾಗವಹಿಸಿದ ಎಲ್ಲರಿಗೂ ಭಾಗವಹಿಸುವಿಕೆಯ e-ಪ್ರಮಾಣಪತ್ರವನ್ನು ನೀಡಲಾಗುತ್ತದೆ

Terms and Conditions

1)      ರಸಪ್ರಶ್ನೆ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.

2)      ಭಾಗವಹಿಸುವವರುಪ್ಲೇ ಕ್ವಿಜ್ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಕ್ವಿಜ್ ಪ್ರಾರಂಭವಾಗುತ್ತದೆ.

3)      ರಸಪ್ರಶ್ನೆ 300 ಸೆಕೆಂಡುಗಳಲ್ಲಿ ಉತ್ತರಿಸಬೇಕಾದ 10 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಯಾವುದೇ ನಕಾರಾತ್ಮಕ ಅಂಕ (ನೆಗೆಟಿವ್ ಮಾರ್ಕಿಂಗ್) ವ್ಯವಸ್ಥೆ ಇರುವುದಿಲ್ಲ.

4)      ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಪ್ರಸ್ತುತಪಡಿಸಲಾದ ಪ್ರಶ್ನೆಯಲ್ಲಿ ಯಾವುದೇ ವ್ಯತ್ಯಾಸ ಅಥವಾ ದೋಷ ಕಂಡುಬಂದರೆ, ಪ್ರಶ್ನೆಯ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಮತ್ತು ಬದ್ಧವೆಂದು ಪರಿಗಣಿಸಲಾಗುತ್ತದೆ.

5)      ನಿಗದಿತ ಸಮಯದ ನಂತರದ ಭಾಗವಹಿಸುವಿಕೆಯನ್ನು ಪರಿಗಣಿಸಲಾಗುವುದಿಲ್ಲ.

6)      ಹೆಚ್ಚಿನ ಸಂವಹನಕ್ಕಾಗಿ, ಭಾಗವಹಿಸುವವರು ತಮ್ಮ ಮೈಗವ್ ಪ್ರೊಫೈಲ್ ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಪೂರ್ಣವಾದ ಪ್ರೊಫೈಲ್ ಹೊಂದಿರುವವರು ವಿಜೇತರಾಗಲು ಅರ್ಹವಾಗುವುದಿಲ್ಲ.

7)      ಪ್ರತಿಯೊಬ್ಬ ಭಾಗವಹಿಸುವವರು ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಮೇಲ್ ID ಮೂಲಕ ಕೇವಲ ಒಮ್ಮೆ ಮಾತ್ರ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲು ಅನುಮತಿಸಲಾಗುತ್ತದೆ. ಭಾಗವಹಿಸಲು ಒಂದೇ ಮೊಬೈಲ್ ಸಂಖ್ಯೆ ಮತ್ತು ಮೇಲ್ ID ಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಬಾರದು.

8)      ಭಾಗವಹಿಸುವವರು ಮೊಬೈಲ್ ಸಂಖ್ಯೆ ಮತ್ತು ಮೇಲ್ ID ಎರಡನ್ನೂ ಬಳಸಿಕೊಂಡು ಪಾಲ್ಗೊಂಡ ಸಂದರ್ಭಗಳಲ್ಲಿ, ಸಲ್ಲಿಸಿದ ಒಂದು ನಮೂದನ್ನು ಮಾತ್ರ ಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ವಿಜೇತರ ಆಯ್ಕೆ ಪ್ರಕ್ರಿಯೆಗೆ ಅರ್ಹವಾಗಿರುತ್ತದೆ.

9)      ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಯಾವುದೇ ಕ್ಷಣದಲ್ಲಿ ರಸಪ್ರಶ್ನೆಯನ್ನು ಮಾರ್ಪಡಿಸುವ ಅಥವಾ ನಿಲ್ಲಿಸುವ ಹಕ್ಕನ್ನು ಮೈ ಗವ್ ಹೊಂದಿದೆ. ಸಂದೇಹ ನಿವಾರಣೆಗಾಗಿ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ.

10)   ಭಾಗವಹಿಸುವವರು ತಮ್ಮ ಹೆಸರು, ಮೇಲ್ ವಿಳಾಸ, ಹುಟ್ಟಿದ ದಿನಾಂಕ, ಪತ್ರವ್ಯವಹಾರದ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು. ತಮ್ಮ ವಿವರಗಳನ್ನು ಸಲ್ಲಿಸುವ ಮೂಲಕ, ಭಾಗವಹಿಸುವವರು ವಿವರಗಳನ್ನು ರಸಪ್ರಶ್ನೆಯ ಉದ್ದೇಶಕ್ಕಾಗಿ ಬಳಸಲು ಒಪ್ಪಿಗೆಯನ್ನು ನೀಡುತ್ತಾರೆ.

11)   ಯಾವುದೇ ಭಾಗವಹಿಸುವವರ ಭಾಗವಹಿಸುವಿಕೆ ಅಥವಾ ಒಳಗೊಳ್ಳುವಿಕೆ ರಸಪ್ರಶ್ನೆಗೆ ಹಾನಿಕಾರಕವೆಂದು ಭಾವಿಸಿದರೆ, ಅವರನ್ನು ಅನರ್ಹಗೊಳಿಸುವ ಅಥವಾ ನಿರಾಕರಿಸುವ ಎಲ್ಲಾ ಹಕ್ಕುಗಳನ್ನು ಸಂಘಟಕರು ಕಾಯ್ದಿರಿಸಿದ್ದಾರೆ. ಸ್ವೀಕರಿಸಿದ ಮಾಹಿತಿಯು ಅಸ್ಪಷ್ಟವಾಗಿದ್ದರೆ, ಅಪೂರ್ಣವಾಗಿದ್ದರೆ, ಹಾನಿಗೊಳಗಾಗಿದ್ದರೆ, ಸುಳ್ಳಾಗಿದ್ದರೆ ಅಥವಾ ತಪ್ಪಾಗಿದ್ದರೆ ಭಾಗವಹಿಸುವಿಕೆಯು ಅನೂರ್ಜಿತವಾಗಿರುತ್ತದೆ.

12)   ಕಳೆದುಹೋದ, ತಡವಾಗಿ ಅಥವಾ ಅಪೂರ್ಣವಾಗಿರುವ ಅಥವಾ ಕಂಪ್ಯೂಟರ್ ದೋಷ ಅಥವಾ ಸಂಘಟಕರ ಸಮಂಜಸವಾದ ನಿಯಂತ್ರಣವನ್ನು ಮೀರಿದ ಯಾವುದೇ ದೋಷದಿಂದಾಗಿ ರವಾನೆಯಾಗದ ನಮೂದುಗಳಿಗೆ ಮೈ ಗವ್ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ನಮೂದನ್ನು ಸಲ್ಲಿಸುವ ಪುರಾವೆಯು ಅದನ್ನು ಸ್ವೀಕರಿಸಿದ ಪುರಾವೆಯಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. 

13)   Income tax department ಮತ್ತು MyGov ನ ನೌಕರರು ಅಥವಾ ಈ ರಸಪ್ರಶ್ನೆಯನ್ನು ಆಯೋಜಿಸುವಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ಉದ್ಯೋಗಿಗಳು ಈ ರಸಪ್ರಶ್ನೆಯಲ್ಲಿ ಭಾಗವಹಿಸಲು ಅರ್ಹರಲ್ಲ. ಈ ಅನರ್ಹತೆಯು ಅವರ ಹತ್ತಿರದ ಕುಟುಂಬ ಸದಸ್ಯರಿಗೂ ವಿಸ್ತರಿಸುತ್ತದೆ.

14)   ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಯಿಂದ ರಚಿಸಲಾದ ಯಾದೃಚ್ಛಿಕ ವಿಧಾನದ ಮೂಲಕ ವಿಜೇತರ ಆಯ್ಕೆಯನ್ನು ನಡೆಸಲಾಗುತ್ತದೆ. ಎಲ್ಲಾ ಸರಿಯಾದ ಉತ್ತರಗಳು ಮತ್ತು ನಿಗದಿತ ಸಮಯದೊಳಗೆ ಸಲ್ಲಿಕೆ ಸೇರಿದಂತೆ ಉಲ್ಲೇಖಿಸಲಾದ ರಸಪ್ರಶ್ನೆ ವಿಜೇತ ಮಾನದಂಡಗಳನ್ನು ಪೂರೈಸುವ ಎಲ್ಲಾ ಭಾಗವಹಿಸುವವರನ್ನು ಅರ್ಹ ನಮೂದುಗಳ ಕೇಂದ್ರೀಕೃತ ಪೂಲ್‌ನಲ್ಲಿ ಸೇರಿಸಲಾಗುತ್ತದೆ. ವಿಜೇತರನ್ನು ಸ್ವಯಂಚಾಲಿತ ಯಾದೃಚ್ಛಿಕ ಆಯ್ಕೆ ಪ್ರಕ್ರಿಯೆಯ ಮೂಲಕ ಮಾತ್ರ ಆಯ್ಕೆ ಮಾಡಲಾಗುತ್ತದೆ.

15)   ರಸಪ್ರಶ್ನೆಯ ಕುರಿತು ಆಯೋಜಕರ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ, ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರವ್ಯವಹಾರವನ್ನು ಮಾಡಲಾಗುವುದಿಲ್ಲ.

16)   ಭಾಗವಹಿಸುವವರು ಎಲ್ಲಾ ನವೀಕರಣಗಳಿಗಾಗಿ ವಿಷಯದ ಬಗ್ಗೆ ನಿಯಮಿತವಾಗಿ ಅನುಸರಿಸಬೇಕಾಗುತ್ತದೆ.

17)   ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಪಾಲ್ಗೊಳ್ಳುವವರು ತಮ್ಮ ಭಾಗವಹಿಸುವಿಕೆ ಮತ್ತು ಪೂರ್ಣಗೊಳಿಸುವಿಕೆಯನ್ನು ಗುರುತಿಸುವ ಡಿಜಿಟಲ್ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವಯಂಡೌನ್ಲೋಡ್ ಮಾಡಬಹುದು.

18)   ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ, ಭಾಗವಹಿಸುವವರು ಯಾವುದೇ ತಿದ್ದುಪಡಿಗಳು ಅಥವಾ ಹೆಚ್ಚಿನ ನವೀಕರಣಗಳನ್ನು ಒಳಗೊಂಡಂತೆ ರಸಪ್ರಶ್ನೆ ಸ್ಪರ್ಧೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.

19)   ಎಲ್ಲಾ ವಿವಾದಗಳು / ಕಾನೂನಾತ್ಮಕ ದೂರುಗಳು ದೆಹಲಿಯ ನ್ಯಾಯವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಉದ್ದೇಶಕ್ಕಾಗಿ ಮಾಡಿದ ವೆಚ್ಚಗಳನ್ನು ಭಾಗವಹಿಸುವವರೇ ಸ್ವತಃ ಭರಿಸಬೇಕು. 

20)   ಇನ್ನು ಮುಂದೆ ನಿಯಮಗಳು ಮತ್ತು ಷರತ್ತುಗಳು ಭಾರತೀಯ ಕಾನೂನುಗಳು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳಿಂದ ನಿಯಂತ್ರಿಸಲ್ಪಡುತ್ತವೆ.