ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು ಮೈಗವ್ ಸಹಯೋಗದೊಂದಿಗೆ ಭಾರತದ ಎಲ್ಲಾ ಶಾಲಾ ವಿದ್ಯಾರ್ಥಿಗಳನ್ನು ದೇಶ ವಿಭಜನೆಯಾದ ಭಯಾನಕ ದಿನದ ಸ್ಮರಣಾರ್ಥ ದಿನ-ಆಗಸ್ಟ್ 14 ರಂದು ಕ್ವಿಜ್‌ನಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ.
ಈ ರಸಪ್ರಶ್ನೆಯನ್ನು ಆಗಸ್ಟ್ 14 ರಂದು ನಡೆದ ವಿಭಜನೆಯ ಭಯಾನಕತೆಯ ಸ್ಮರಣೆಯ ದಿನವನ್ನು ನೆನಪಿಸಲು ಮತ್ತು ಭಾರತದ ವಿಭಜನೆಯ ದುರಂತ ಮಾನವ ಪರಿಣಾಮಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ.
ಸ್ಮರಣಿಕೆ: ಪಾಲ್ಗೊಂಡ ಎಲ್ಲರಿಗೂ ಭಾಗವಹಿಸುವಿಕೆಯ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ ಮತ್ತು ಅತಿ ಹೆಚ್ಚು ಅಂಕ ಗಳಿಸಿದ ಮೊದಲ 10 ವಿದ್ಯಾರ್ಥಿಗಳಿಗೆ ತಲಾ ರೂ. 5,000/- ನಗದು ಬಹುಮಾನವನ್ನು ನೀಡಲಾಗುವುದು.
1. ಈ ರಸಪ್ರಶ್ನೆ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ.
2.ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ.
3.ಸ್ಪರ್ಧಿಯು ‘ಪ್ಲೇ ಕ್ವಿಜ್’ ಮೇಲೆ ಕ್ಲಿಕ್ ಮಾಡಿದ ಕೂಡಲೇ ರಸಪ್ರಶ್ನೆ ಪ್ರಾರಂಭವಾಗುತ್ತದೆ.
4.ರಸಪ್ರಶ್ನೆ ಬಹು ಆಯ್ಕೆ ಪ್ರಶ್ನೆಗಳನ್ನು (MCQ) ಒಳಗೊಂಡಿದೆ.
5.ಎಲ್ಲಾ ಪ್ರಶ್ನೆಗಳಿಗೆ ನಾಲ್ಕು ಆಯ್ಕೆಗಳಿರುತ್ತದೆ ಮತ್ತು ಕೇವಲ ಒಂದು ಸರಿಯಾದ ಉತ್ತರವಿರುತ್ತದೆ.
6.ಒಬ್ಬರೇ ಸ್ಪರ್ಧಿ ಅನೇಕ ಲಾಗಿನ್ ಮೂಲಕ ಪಾಲ್ಗೊಳ್ಳುವ ಹಾಗಿಲ್ಲ.
7.ಭಾಗವಹಿಸುವವರು ತಮ್ಮ ಮೈಗವ್ ಪ್ರೊಫೈಲ್ ನಿಖರವಾಗಿದೆ ಮತ್ತು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
8.ಇದು ಸಮಯ ಮಿತಿಯ ರಸಪ್ರಶ್ನೆ: 10 ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ 300 ಸೆಕೆಂಡುಗಳ ಕಾಲಾವಕಾಶವಿರುತ್ತದೆ.
9.ರಸಪ್ರಶ್ನೆಯಲ್ಲಿ ಭಾಗವಹಿಸುವ ಸಮಯದಲ್ಲಿ ಬದಲಿ ಭಾಗವಹಿಸುವಿಕೆ, ಅನೇಕ ಬಾರಿ ಭಾಗವಹಿಸುವಿಕೆ ಇತ್ಯಾದಿಗಳನ್ನು ಒಳಗೊಂಡಂತೆ ಆದರೆ ಅವುಗಳಿಗಷ್ಟೇ ಸೀಮಿತವಾಗಿರದ ಯಾವುದೇ ಅನ್ಯಾಯದ ಮಾರ್ಗ/ಕಪಟ ವಿಧಾನಗಳು/ದುರಾಚಾರಗಳ ಕಂಡು ಬಂದರೆ/ಪತ್ತೆಹಚ್ಚಿದಲ್ಲಿ/ಗಮನಕ್ಕೆ ಬಂದರೆ ಅಂತಹವರ ಭಾಗವಹಿಸುವಿಕೆಯನ್ನು ನಗಣ್ಯ ಮತ್ತು ಅನೂರ್ಜಿತವೆಂದು ಘೋಷಿಸಲಾಗುತ್ತದೆ, ಹೀಗಾಗಿ ತಿರಸ್ಕರಿಸಲಾಗುತ್ತದೆ. ರಸಪ್ರಶ್ನೆ ಸ್ಪರ್ಧೆಯ ಆಯೋಜಕರು ಈ ನಿಟ್ಟಿನಲ್ಲಿ ತಮ್ಮ ಹಕ್ಕನ್ನು ಕಾಯ್ದಿರಿಸಿದ್ದಾರೆ.
10.ಕಳೆದುಹೋದ, ತಡವಾಗಿ ಅಥವಾ ಅಪೂರ್ಣವಾಗಿರುವ ಅಥವಾ ಕಂಪ್ಯೂಟರ್ ದೋಷ ಅಥವಾ ಸಂಘಟಕರ ಸಮಂಜಸವಾದ ನಿಯಂತ್ರಣವನ್ನು ಮೀರಿದ ಯಾವುದೇ ಇತರ ದೋಷದಿಂದಾಗಿ ಪ್ರಸಾರವಾಗದ ನಮೂದುಗಳಿಗೆ ಸಂಘಟಕರು ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ದಯವಿಟ್ಟು ಗಮನಿಸಿ, ನಮೂದನ್ನು ಸಲ್ಲಿಸಿದ ಪುರಾವೆ ಅದನ್ನು ಸ್ವೀಕರಿಸಿದ ಪುರಾವೆಯಲ್ಲ.
11.ಅನಿರೀಕ್ಷಿತ ಸಂದರ್ಭಗಳಲ್ಲಿ, ಸಂಘಟಕರು ಯಾವುದೇ ಸಮಯದಲ್ಲಿ ರಸಪ್ರಶ್ನೆ ಅನ್ನು ತಿದ್ದುಪಡಿ ಮಾಡುವ ಅಥವಾ ಹಿಂತೆಗೆದುಕೊಳ್ಳುವ ಹಕ್ಕನ್ನು ಕಾಯ್ದಿರಿಸಿದ್ದಾರೆ. ಅನುಮಾನವನ್ನು ತಪ್ಪಿಸಲು, ಇದು ಈ ನಿಯಮಗಳು ಮತ್ತು ಷರತ್ತುಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಒಳಗೊಂಡಿದೆ.
12.ರಸಪ್ರಶ್ನೆ ಕುರಿತು ಸಂಘಟಕರ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರವ್ಯವಹಾರವನ್ನು ಮಾಡಲಾಗುವುದಿಲ್ಲ.
13.ಎಲ್ಲಾ ವಿವಾದಗಳು / ಕಾನೂನಾತ್ಮಕ ದೂರುಗಳು ದೆಹಲಿಯ ನ್ಯಾಯವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಈ ಉದ್ದೇಶಕ್ಕಾಗಿ ಮಾಡಿದ ವೆಚ್ಚಗಳನ್ನು ಸ್ವತಃ ತಾವೇ ಭರಿಸಬೇಕು.
14.ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ, ಭಾಗವಹಿಸುವವರು ಯಾವುದೇ ತಿದ್ದುಪಡಿಗಳು ಅಥವಾ ಹೆಚ್ಚಿನ ನವೀಕರಣಗಳನ್ನು ಒಳಗೊಂಡಂತೆ ಸ್ಪರ್ಧೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.
15.ಇನ್ನು ಮುಂದೆ ನಿಯಮಗಳು ಮತ್ತು ಷರತ್ತುಗಳು ಭಾರತೀಯ ಕಾನೂನುಗಳು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳಿಂದ ನಿಯಂತ್ರಿಸಲ್ಪಡುತ್ತವೆ.