GOVERNMENT OF INDIA
Accessibility
Accessibility Tools
Color Adjustment
Text Size
Navigation Adjustment
Screen Reader iconScreen Reader

Bharatiya Gyan Quiz on Knowing Bharat (Kannada)

Start Date : 18 Dec 2025, 12:00 pm
End Date : 18 Jan 2026, 11:45 pm
Closed
Quiz Banner
  • 10 Questions
  • 300 Seconds
Login to Play Quiz

About Quiz

ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಜ್ಞಾನ ವ್ಯವಸ್ಥೆಗಳ (IKS) ವಿಭಾಗವು, ಮೈಗವ್ ಸಹಯೋಗದೊಂದಿಗೆ, ಭಾರತದ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಬಗ್ಗೆ ಜನರಲ್ಲಿ ಅರಿವು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಪ್ರತಿ ತಿಂಗಳು ರಾಷ್ಟ್ರೀಯ ಮಟ್ಟದ ರಸಪ್ರಶ್ನೆಯನ್ನು ನಡೆಸುತ್ತಿದೆ. ಪ್ರತಿಯೊಂದು ರಸಪ್ರಶ್ನೆಯು IKS ಜ್ಞಾನ ಕ್ಷೇತ್ರದ ಒಂದು ವಿಷಯದ ಮೇಲೆ ಕೇಂದ್ರೀಕರಿಸುತ್ತದೆ, ಇದು ವರ್ಷವಿಡೀ ವಿವಿಧ ವಿಷಯಗಳ ವ್ಯವಸ್ಥಿತ ಪ್ರಸಾರಕ್ಕೆ ಅನುವು ಮಾಡಿಕೊಡುತ್ತದೆ.

 

ಈ ಉಪಕ್ರಮವು ನಿರಂತರ ಕಲಿಕಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಅಲ್ಲಿ ಭಾಗವಹಿಸುವವರು ಭಾರತದ ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ತಾತ್ವಿಕ ಸಂಪ್ರದಾಯಗಳನ್ನು ಸಂವಾದಾತ್ಮಕ ಮತ್ತು ಮೋಜಿನ ರೀತಿಯಲ್ಲಿ  ಅನ್ವೇಷಿಸುತ್ತಾರೆ.

 

ಸಂಪನ್ಮೂಲಗಳಿಗಾಗಿ ನೀವು https://iksindia.org/ ಗೆ ಭೇಟಿ ನೀಡಬಹುದು.

 

ಈ ತಿಂಗಳ ಧ್ಯೇಯವಾಕ್ಯ ಭಾರತವನ್ನು ತಿಳಿದುಕೊಳ್ಳುವುದು  – ಇಲ್ಲಿ ಗಮನವು ಭಾರತದ ಒಟ್ಟಾರೆ ಸಾಂಪ್ರದಾಯಿಕ ಭೌಗೋಳಿಕತೆ ಮತ್ತು ನಾಗರಿಕತೆಯ ಇತಿಹಾಸದ ಮೇಲೆ ಇರುತ್ತದೆ. ಈ ರಸಪ್ರಶ್ನೆಯು ಭಾರತದ ನಾಗರಿಕತೆಯ ಅಭಿವೃದ್ಧಿಯಲ್ಲಿ  ಪ್ರಮುಖ  ಪಾತ್ರ ವಹಿಸಿರುವ ಭಾರತದ ಕೆಲವು ವಿಶಿಷ್ಟ ಅಂಶಗಳನ್ನು ಎತ್ತಿ ತೋರಿಸುತ್ತದೆ.

 

ತೃಪ್ತಿ.

1.      ಪ್ರತಿ ತಿಂಗಳು ಅತ್ಯುತ್ತಮ 5 ಪ್ರದರ್ಶಕರಿಗೆ ಈ ಕೆಳಗಿನ ಪ್ರಶಸ್ತಿಗಳನ್ನು ನೀಡಲಾಗುವುದು:

a.      ಪುಸ್ತಕ ಬಹುಮಾನಗಳು: ಪ್ರತಿ ವಿಜೇತರಿಗೆ IKS ಸಂಗ್ರಹಿಸಿದ ₹3,000 ಮೌಲ್ಯದ ಪುಸ್ತಕ ಹ್ಯಾಂಪರ್ ಸಿಗುತ್ತದೆ.

b.      ಗುರುತಿಸುವಿಕೆ: IKS ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಇತರ ಅಧಿಕೃತ ಸಂವಹನ ವೇದಿಕೆಗಳಲ್ಲಿ (ಅನ್ವಯವಾಗುವಲ್ಲಿ)ಸ್ವೀಕೃತಿ.

c.       ಭಾಗವಹಿಸುವ ಅವಕಾಶಗಳು: ವಿಜೇತರನ್ನು ದೇಶದ ಎಲ್ಲಿಯಾದರೂ IKS ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಬಹುದು, ಇದು ಕಾರ್ಯಕ್ರಮದ ಸ್ವರೂಪ ಮತ್ತು ವೇಳಾಪಟ್ಟಿಯನ್ನು ಅವಲಂಬಿಸಿರುತ್ತದೆ.

2.      ಪ್ರತಿಯೊಬ್ಬ ಭಾಗವಹಿಸುವವರು ಭಾಗವಹಿಸುವಿಕೆಯ ಇ-ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

Terms and Conditions

1.      ಈ ರಸಪ್ರಶ್ನೆ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.  

2.      ಸ್ಪರ್ಧಿಯು ‘ಪ್ಲೇ ಕ್ವಿಜ್’ ಮೇಲೆ ಕ್ಲಿಕ್ ಮಾಡಿದ ಕೂಡಲೇ ರಸಪ್ರಶ್ನೆ ಪ್ರಾರಂಭವಾಗುತ್ತದೆ.

3.      ಒಮ್ಮೆ ಸಲ್ಲಿಸಿದ ನಂತರ ನಮೂದನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ.

4.      ಭಾಗವಹಿಸುವವರು ತಮ್ಮ ಹೆಸರು, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ವಿವರಗಳನ್ನು ಒದಗಿಸಬೇಕಾಗುತ್ತದೆ. ತಮ್ಮ ವಿವರಗಳನ್ನು ಸಲ್ಲಿಸುವ ಮೂಲಕ ಮತ್ತು ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ, ಭಾಗವಹಿಸುವವರು ಈ ಮಾಹಿತಿಯನ್ನು ರಸಪ್ರಶ್ನೆ ಸ್ಪರ್ಧೆಯ ನಿರ್ವಹಣೆಗೆ ಅಗತ್ಯವಿರುವಂತೆ ಬಳಸಲು ಮೈಗವ್ ಮತ್ತು ಶಿಕ್ಷಣ ಸಚಿವಾಲಯ ಮತ್ತು IKS ವಿಭಾಗಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ. ಇದರಲ್ಲಿ ಭಾಗವಹಿಸುವವರ ವಿವರಗಳ ದೃಢೀಕರಣವೂ ಸೇರಿರಬಹುದು.

5.      ರಸಪ್ರಶ್ನೆಯು 5 ನಿಮಿಷಗಳವರೆಗೆ (300 ಸೆಕೆಂಡುಗಳು) ಇರುತ್ತದೆ, ಈ ಸಮಯದಲ್ಲಿ ನೀವು 10 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

6.      ಒಂದೇ ಭಾಗವಹಿಸುವವರಿಂದ ಬಹು ನಮೂದುಗಳನ್ನು ಸ್ವೀಕರಿಸಲಾಗುವುದಿಲ್ಲ.

7.      ರಸಪ್ರಶ್ನೆಯಲ್ಲಿ ಭಾಗವಹಿಸುವ ಸಮಯದಲ್ಲಿ ಬದಲಿ ಭಾಗವಹಿಸುವಿಕೆ, ಅನೇಕ ಬಾರಿ ಭಾಗವಹಿಸುವಿಕೆ ಇತ್ಯಾದಿಗಳನ್ನು ಒಳಗೊಂಡಂತೆ ಆದರೆ ಅವುಗಳಿಗಷ್ಟೇ ಸೀಮಿತವಾಗಿರದ ಯಾವುದೇ ಅನ್ಯಾಯದ ಮಾರ್ಗ/ಕಪಟ ವಿಧಾನಗಳು/ದುರಾಚಾರಗಳ ಕಂಡು ಬಂದರೆ/ಪತ್ತೆಹಚ್ಚಿದಲ್ಲಿ/ಗಮನಕ್ಕೆ ಬಂದರೆ ಅಂತಹವರ ಭಾಗವಹಿಸುವಿಕೆಯನ್ನು ನಗಣ್ಯ ಮತ್ತು ಅನೂರ್ಜಿತವೆಂದು ಘೋಷಿಸಲಾಗುತ್ತದೆ ಹೀಗಾಗಿ ತಿರಸ್ಕರಿಸಲಾಗುತ್ತದೆ. ರಸಪ್ರಶ್ನೆ ಸ್ಪರ್ಧೆಯ ಸಂಘಟಕರು ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸುವ ಯಾವುದೇ ಏಜೆನ್ಸಿ ಈ ನಿಟ್ಟಿನಲ್ಲಿ ಹಕ್ಕನ್ನು ಕಾಯ್ದಿರಿಸಿದೆ.

8.      ರಸಪ್ರಶ್ನೆಯನ್ನು ಆಯೋಜಿಸುವಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರುವ ಉದ್ಯೋಗಿಗಳು ರಸಪ್ರಶ್ನೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ. ಈ ಅನರ್ಹತೆಯು ಅವರ ಹತ್ತಿರದ ಕುಟುಂಬ ಸದಸ್ಯರಿಗೂ ಅನ್ವಯಿಸುತ್ತದೆ.

9.      ಅನಿರೀಕ್ಷಿತ ಸಂದರ್ಭಗಳಲ್ಲಿ, ಶಿಕ್ಷಣ ಸಚಿವಾಲಯ ಮತ್ತು ಮೈಗವ್ ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳನ್ನು ಯಾವುದೇ ಸಮಯದಲ್ಲಿ ತಿದ್ದುಪಡಿ ಮಾಡುವ ಅಥವಾ ಪರಿಗಣಿಸಲಾದಂತೆ ಸ್ಪರ್ಧೆಯನ್ನು ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿವೆ.

10.  ಭಾಗವಹಿಸುವವರು ಎಲ್ಲಾ ಅಪ್‌ಡೇಟ್‌ಗಳಿಗಾಗಿ ಕಂಟೆಂಟ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕಾಗುತ್ತದೆ.

11.  ಕಂಪ್ಯೂಟರ್ ದೋಷ ಅಥವಾ ಸಂಘಟಕರ ಜವಾಬ್ದಾರಿಯನ್ನು ಮೀರಿದ ಯಾವುದೇ ಇತರ ದೋಷದಿಂದಾಗಿ ಕಳೆದುಹೋದ, ತಡವಾದ, ಅಪೂರ್ಣವಾದ ಅಥವಾ ರವಾನಿಸದ ನಮೂದುಗಳಿಗೆ ಶಿಕ್ಷಣ ಸಚಿವಾಲಯ ಮತ್ತು ಮೈಗವ್ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ.

12.  ಸ್ಪರ್ಧಿಗಳು ಯಾವುದೇ ತಿದ್ದುಪಡಿಗಳು ಅಥವಾ ಹೆಚ್ಚಿನ ನವೀಕರಣಗಳು ಸೇರಿದಂತೆ ರಸಪ್ರಶ್ನೆ ಸ್ಪರ್ಧೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.

13.  ರಸಪ್ರಶ್ನೆಗೆ ಸಂಬಂಧಿಸಿದಂತೆ IKS ವಿಭಾಗ, ಶಿಕ್ಷಣ ಸಚಿವಾಲಯ ಮತ್ತು ಮೈಗವನ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ ಮತ್ತು ಈ ವಿಷಯದ ಬಗ್ಗೆ ಯಾವುದೇ ಮಾತುಕತೆಗೆ ಅವಕಾಶವಿರುವುದಿಲ್ಲ.

14.  ಎಲ್ಲಾ ವಿವಾದಗಳು / ಕಾನೂನಾತ್ಮಕ ದೂರುಗಳು ದೆಹಲಿಯ ನ್ಯಾಯವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಈ ಉದ್ದೇಶಕ್ಕಾಗಿ ಮಾಡಿದ ವೆಚ್ಚಗಳನ್ನು ಭಾಗವಹಿಸುವವರೇ ಸ್ವತಃ ಭರಿಸಬೇಕು.

15.  ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ, ಭಾಗವಹಿಸುವವರು ಮೇಲೆ ತಿಳಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿಕೊಳ್ಳುತ್ತಾರೆ ಮತ್ತು ಒಪ್ಪುತ್ತಾರೆ.

16.  ರಸಪ್ರಶ್ನೆ ಮತ್ತು/ಅಥವಾ ನಿಯಮಗಳು ಮತ್ತು ಷರತ್ತುಗಳು/ತಾಂತ್ರಿಕ ನಿಯತಾಂಕಗಳು/ಮೌಲ್ಯಮಾಪನ ಮಾನದಂಡಗಳ ಎಲ್ಲಾ ಅಥವಾ ಯಾವುದೇ ಭಾಗವನ್ನು ರದ್ದುಗೊಳಿಸುವ ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ಸಂಘಟಕರು ಕಾಯ್ದಿರಿಸಿದ್ದಾರೆ. ಆದಾಗ್ಯೂ, ನಿಯಮಗಳು ಮತ್ತು ಷರತ್ತುಗಳು / ತಾಂತ್ರಿಕ ನಿಯತಾಂಕಗಳು / ಮೌಲ್ಯಮಾಪನ ಮಾನದಂಡಗಳಲ್ಲಿನ ಯಾವುದೇ ಬದಲಾವಣೆಗಳು ಅಥವಾ ಸ್ಪರ್ಧೆಯ ರದ್ದತಿಯನ್ನು ನವೀಕರಿಸಲಾಗುತ್ತದೆ / ವೇದಿಕೆಯಲ್ಲಿ ಪೋಸ್ಟ್ ಮಾಡಲಾಗುತ್ತದೆ.

17.  ಇನ್ನು ಮುಂದೆ ನಿಯಮಗಳು ಮತ್ತು ಷರತ್ತುಗಳು ಭಾರತೀಯ ಕಾನೂನುಗಳು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳಿಂದ ನಿಯಂತ್ರಿಸಲ್ಪಡುತ್ತವೆ.