GOVERNMENT OF INDIA
Accessibility
Accessibility Tools
Color Adjustment
Text Size
Navigation Adjustment
Screen Reader iconScreen Reader

5 Varsh 1 Sankalp – Nasha Mukt Bharat Abhiyaan Quiz (Kannada)

Start Date : 25 Sep 2025, 10:00 am
End Date : 8 Nov 2025, 11:45 pm
Closed
Quiz Closed

About Quiz

ಮಾದಕವಸ್ತುಗಳ ಅತಿಯಾದ ಮತ್ತು ವ್ಯಸನಕಾರಿ ವೈದ್ಯಕೀಯವಲ್ಲದ ಬಳಕೆಯು ತೀವ್ರವಾದ ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ವ್ಯಕ್ತಿಗಳ ಆರೋಗ್ಯ ಹದಗೆಡುವುದಕ್ಕೆ ಕಾರಣವಾಗುವಂತೆ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ (MoSJE), ಭಾರತ ಸರ್ಕಾರ, ಮಾದಕವಸ್ತು ಬೇಡಿಕೆಯನ್ನು ಎದುರಿಸಲು 2020 ರ ಆಗಸ್ಟ್ 15 ರಂದು ನಶೆ ಮುಕ್ತ ಭಾರತ ಅಭಿಯಾನ (NMBA) ಪ್ರಾರಂಭಿಸಿತು. ಮಾದಕಗಳ ಬೇಡಿಕೆ ಕಡಿತಕ್ಕೆ ನೋಡಲ್ ಸಚಿವಾಲಯವಾಗಿ, ಇದು ತಡೆಗಟ್ಟುವಿಕೆ, ಮೌಲ್ಯಮಾಪನ, ಚಿಕಿತ್ಸೆ, ಪುನರ್ವಸತಿ, ನಂತರದ ಆರೈಕೆ, ಸಾರ್ವಜನಿಕ ಮಾಹಿತಿ ಪ್ರಸರಣ ಮತ್ತು ಸಮುದಾಯ ಜಾಗೃತಿ ಸೇರಿದಂತೆ ವಿವಿಧ ಉಪಕ್ರಮಗಳನ್ನು ಸಂಘಟಿಸುತ್ತದೆ. NMBA ಆರಂಭದಲ್ಲಿ 272 ದುರ್ಬಲ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ದೇಶಾದ್ಯಂತ ವಿಸ್ತರಿಸಿದ್ದು, 06+ ಕೋಟಿ ಯುವಕರು, 04+ ಕೋಟಿ ಮಹಿಳೆಯರು ಮತ್ತು 5.03+ ಲಕ್ಷ ಶಿಕ್ಷಣ ಸಂಸ್ಥೆಗಳು ಸೇರಿದಂತೆ 19+ ಕೋಟಿಗೂ ಹೆಚ್ಚು ವ್ಯಕ್ತಿಗಳನ್ನು ತಲುಪಿದೆ. NMBA ತನ್ನ ಆರನೇ ವರ್ಷಕ್ಕೆ ಕಾಲಿಡುತ್ತಿರುವಾಗ, NMBA ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು MyGov ಸಹಯೋಗದೊಂದಿಗೆ NMBA ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುತ್ತಿದೆ. 

 

MoSJE ಮತ್ತು ಮೈಗವ್ ನಾಗರಿಕರನ್ನು 5 ವರ್ಷಗಳು, 1 ಸಂಕಲ್ಪ – ನಶೆ ಮುಕ್ತ ಭಾರತ ಅಭಿಯಾನ ರಸಪ್ರಶ್ನೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತದೆ.  ರಸಪ್ರಶ್ನೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೆ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ. 

 

ಬಹುಮಾನ

5 ವರ್ಷ 1 ಸಂಕಲ್ಪ – ನಶೆ ಮುಕ್ತ ಭಾರತ ಅಭಿಯಾನ ರಸಪ್ರಶ್ನೆ ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಆಯೋಜಿಸಿರುವ ಮೂರು ಹಂತದ ರಾಷ್ಟ್ರೀಯ ಸ್ಪರ್ಧೆಯ ಮೊದಲ ಹಂತವಾಗಿದೆ. ಈ ರಸಪ್ರಶ್ನೆ ಮೂಲಕ, ಇಲಾಖೆ ನೀಡಿದ ವಿಷಯಗಳ ಬಗ್ಗೆ ಪ್ರಬಂಧ ಬರೆಯಲು 3,500 ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಈ ಪೈಕಿ 200 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ನವದೆಹಲಿಗೆ ಆಹ್ವಾನಿಸಲಾಗುವುದು. ಇವುಗಳಿಂದ, ಅಗ್ರ 20 ವಿಜೇತರು ಗಡಿ ರಕ್ಷಣಾ ಪ್ರದೇಶಕ್ಕೆ ಸಂಪೂರ್ಣ ಪ್ರಾಯೋಜಿತ ಶೈಕ್ಷಣಿಕ ಪ್ರವಾಸವನ್ನು ಪಡೆಯುತ್ತಾರೆ. 

Terms and Conditions

1. ಮೈಗವ್ ನ ಸಹಯೋಗದೊಂದಿಗೆ  ರಸಪ್ರಶ್ನೆಯನ್ನು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆಯೋಜಿಸುತ್ತಿದೆ . 

2. ಈ ರಸಪ್ರಶ್ನೆಯು ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದ್ದರೂ, ಮುಂದಿನ ಹಂತದ ಸ್ಪರ್ಧೆಯಾದ ಪ್ರಬಂಧ ಬರೆಯುವ ಸ್ಪರ್ಧೆಗೆ 18-29 ವರ್ಷ ವಯಸ್ಸಿನ ಯುವಕರನ್ನು ಮಾತ್ರ ಪರಿಗಣಿಸಲಾಗುತ್ತದೆ. 

3. ಇದು 10 ನಿಮಿಷಗಳಲ್ಲಿ (600 ಸೆಕೆಂಡುಗಳು) 20 ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಮಯೋಚಿತ ರಸಪ್ರಶ್ನೆ. 

4. ಈ ಪ್ರಶ್ನೆಗಳು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾದಕ ವಸ್ತುಗಳ ಬಳಕೆ ಮತ್ತು ನಾಶ ಮುಕ್ತ ಭಾರತ ಅಭಿಯಾನವನ್ನು ಆಧರಿಸಿರುತ್ತವೆ. 

5. ಭಾಗವಹಿಸುವವರು ‘ಪ್ಲೇ ಕ್ವಿಜ್’ ಬಟನ್ ಕ್ಲಿಕ್ ಮಾಡಿದ ತಕ್ಷಣ ಕ್ವಿಜ್ ಪ್ರಾರಂಭವಾಗುತ್ತದೆ. 

6. ನೀವು ನಿಮ್ಮ ಹೆಸರು, ಇ-ಮೇಲ್ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ನಿಮ್ಮ ಸಂಪರ್ಕ ವಿವರಗಳನ್ನು ಸಲ್ಲಿಸುವ ಮೂಲಕ, ನೀವು ಈ ವಿವರಗಳನ್ನು ರಸಪ್ರಶ್ನೆಗೆ ಬಳಸಲು ಒಪ್ಪಿಗೆಯನ್ನು ನೀಡುತ್ತೀರಿ. 

7. ಒಬ್ಬ ಸ್ಫರ್ಧಿ ಒಮ್ಮೆ ಮಾತ್ರ ಭಾಗವಹಿಸಬಹುದು. 

8. ಎಲ್ಲಾ ಸ್ಫರ್ಧಿಗಳ ಪೈಕಿ, 3,500 ವ್ಯಕ್ತಿಗಳನ್ನು ರಸಪ್ರಶ್ನೆ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಮಾಡಲಾದ ಸ್ಫರ್ಧಿಗಳು ಸ್ವಯಂಚಾಲಿತವಾಗಿ ಮೈಗವ್ ಇನ್ನೋವೇಟ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಬಂಧ ಬರವಣಿಗೆ ಸ್ಪರ್ಧೆಗೆ ಹೋಗುತ್ತಾರೆ. 

9. ಸಂಘಟಕರು ಕಳೆದುಹೋದ, ತಡವಾದ, ಅಪೂರ್ಣವಾದ ಅಥವಾ ಕಂಪ್ಯೂಟರ್ ದೋಷ ಅಥವಾ ಸಂಘಟಕರ ಸಮಂಜಸವಾದ ನಿಯಂತ್ರಣವನ್ನು ಮೀರಿದ ಯಾವುದೇ ಇತರ ದೋಷದಿಂದಾಗಿ ರವಾನಿಸಲಾಗದ ನಮೂದುಗಳಿಗೆ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ , .  

10. ಅನಿರೀಕ್ಷಿತ ಸಂದರ್ಭಗಳಲ್ಲಿ, ಸಂಘಟಕರು ಯಾವುದೇ ಸಮಯದಲ್ಲಿ ರಸಪ್ರಶ್ನೆ ಅನ್ನು ತಿದ್ದುಪಡಿ ಮಾಡುವ ಅಥವಾ ಹಿಂತೆಗೆದುಕೊಳ್ಳುವ ಹಕ್ಕನ್ನು ಕಾಯ್ದಿರಿಸಿದ್ದಾರೆ. ಅನುಮಾನವನ್ನು ತಪ್ಪಿಸಲು, ಇದು ಈ ನಿಯಮಗಳು ಮತ್ತು ಷರತ್ತುಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಒಳಗೊಂಡಿದೆ. 

11. ಭಾಗವಹಿಸುವವರು ಕಾಲಕಾಲಕ್ಕೆ ರಸಪ್ರಶ್ನೆಯಲ್ಲಿ ಭಾಗವಹಿಸುವ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕು. 

12. ಯಾವುದೇ ಸ್ಫರ್ಧಿಗಳ ಭಾಗವಹಿಸುವಿಕೆ ಅಥವಾ ಸಂಘಟನೆಯು ರಸಪ್ರಶ್ನೆ ಅಥವಾ ಆಯೋಜಕರು ಅಥವಾ ರಸಪ್ರಶ್ನೆಯ ಪಾಲುದಾರರಿಗೆ ಹಾನಿಕಾರಕವೆಂದು ಭಾವಿಸಿದರೆ, ಯಾವುದೇ ಭಾಗವಹಿಸುವವರನ್ನು ಅನರ್ಹಗೊಳಿಸುವ ಅಥವಾ ಭಾಗವಹಿಸುವಿಕೆಯನ್ನು ನಿರಾಕರಿಸುವ ಹಕ್ಕನ್ನು ಸಂಘಟಕರು ಕಾಯ್ದಿರಿಸಿದ್ದಾರೆ. ಸಂಘಟಕರು ಸ್ವೀಕರಿಸಿದ ಮಾಹಿತಿಯು ಅಸ್ಪಷ್ಟವಾಗಿದ್ದರೆ, ಅಪೂರ್ಣವಾಗಿದ್ದರೆ, ಹಾನಿಗೊಳಗಾಗಿದ್ದರೆ, ಸುಳ್ಳಾಗಿದ್ದರೆ ಅಥವಾ ತಪ್ಪಾಗಿದ್ದರೆ, ನೋಂದಣಿಗಳು ಅನೂರ್ಜಿತವಾಗುತ್ತವೆ. 

13. ರಸಪ್ರಶ್ನೆ ಬಗ್ಗೆ ಸಂಘಟಕರ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ  ,  ಮತ್ತು ಅದರ ಬಗ್ಗೆ ಯಾವುದೇ ಪತ್ರವ್ಯವಹಾರವನ್ನು ನಡೆಸಲಾಗುವುದಿಲ್ಲ.  

14. ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ನ್ಯಾಯಾಂಗದ ಕಾನೂನುಗಳು ನಿಯಂತ್ರಿಸುತ್ತವೆ. 

15. ರಸಪ್ರಶ್ನೆಯಲ್ಲಿ ಭಾಗವಹಿಸುವ ಮೂಲಕ, ಭಾಗವಹಿಸುವವರು ಮೇಲೆ ತಿಳಿಸಲಾದ ಈ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಲು ಒಪ್ಪಿಕೊಳ್ಳುತ್ತಾರೆ ಮತ್ತು ಒಪ್ಪುತ್ತಾರೆ.