GOVERNMENT OF INDIA

ಸೇವಾ, ಸುಶಸನ್, ಗರೀಬ್ ಕಲ್ಯಾಣ್ ಮಹಾ ರಸಪ್ರಶ್ನೆಯನ್ನು (Karnataka, Kannada)

Start Date : 30 May 2022, 8:00 am
End Date : 30 Jun 2022, 11:30 pm
Closed
Quiz Closed

About Quiz

8 ವರ್ಷಗಳ ಸರ್ಕಾರ ಎಂಬ ವಿಷಯದ ಮೇಲೆ ಸಬ್ ಕಾ ವಿಕಾಸ್ ಮಹಾಕ್ವಿಜ್ ಸರಣಿಯ ಮೂರನೇ ರಸಪ್ರಶ್ನೆ : ಸೇವಾ, ಸುಷಾಸನ್, ಗರೀಬ್ ಕಲ್ಯಾಣ್

ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷಾಚರಣೆ, ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ, ಮೈಗೋವ್ ಸಬ್ಕಾ ವಿಕಾಸ್ ಮಹಾಕ್ವಿಜ್ ಸರಣಿಯಲ್ಲಿ ಮೂರನೇ ರಸಪ್ರಶ್ನೆಯನ್ನು ಪರಿಚಯಿಸುತ್ತಿದೆ, ಇದು ನಾಗರಿಕರಲ್ಲಿ ಜಾಗೃತಿ ಮೂಡಿಸುವ  ಪ್ರಯತ್ನದ ಭಾಗವಾಗಿದೆ. ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಬಗ್ಗೆ ಮತ್ತು ಪ್ರಯೋಜನಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಸ್ಪರ್ಧಿಗಳಿಗೆ ಅರಿವು ಮೂಡಿಸುವ ಗುರಿಯನ್ನು ರಸಪ್ರಶ್ನೆ ಹೊಂದಿದೆ. ಈ ಹಿನ್ನೆಲೆಯಲ್ಲಿ, ನವ ಭಾರತದ ಬಗ್ಗೆ ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಮತ್ತು ಭಾಗವಹಿಸಲು ನಿಮ್ಮೆಲ್ಲರನ್ನೂ ಮೈ-ಗೋವ್ ಆಹ್ವಾನಿಸುತ್ತದೆ. 

 

ಸಬ್ ಕಾ ವಿಕಾಸ್ ಮಹಾಕ್ವಿಜ್ ಸರಣಿಯ ಸ್ಫೂರ್ತಿಯನ್ನು ಮುಂದುವರಿಸುತ್ತಾ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಎಂಬ ಆದರ್ಶಗಳಿಗೆ ಬದ್ಧವಾಗಿದೆ. ಸಮಾಜದ ಬಡವರು ಮತ್ತು ಅಂಚಿನಲ್ಲಿರುವ ವರ್ಗಗಳ ಸಮಗ್ರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ದೇಶದ ಎಲ್ಲಾ ನಾಗರಿಕರಿಗೆ ಅಗತ್ಯಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲಸ ಮಾಡುತ್ತಿದೆ. ಇವು ಪಿರಮಿಡ್ ನ ಕೆಳಭಾಗದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿವೆ. ಕಳೆದ ಎಂಟು ವರ್ಷಗಳಲ್ಲಿ, ಸಮಾಜದ ಕಡುಬಡವರಿಗೆ ಸೌಲಭ್ಯಗಳು ತಲುಪಲಿ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ಅಮೋಘವಾದ ಪ್ರಯಾಸ  ಕಂಡುಬಂದಿದೆ.  ಅಭೂತಪೂರ್ವ ಸಂಖ್ಯೆಯ ಮನೆಗಳು (ಪಿಎಂ ಆವಾಸ್ ಯೋಜನೆ), ನೀಡಲಾದ ನೀರಿನ ಸಂಪರ್ಕಗಳು (ಜಲ ಜೀವನ್ ಮಿಷನ್), ಬ್ಯಾಂಕ್ ಖಾತೆಗಳು (ಜನ್ ಧನ್), ರೈತರಿಗೆ ನೇರ ಲಾಭ ವರ್ಗಾವಣೆ (ಪಿಎಂ ಕಿಸಾನ್) ಅಥವಾ ಉಚಿತ ಅನಿಲ ಸಂಪರ್ಕಗಳು (ಉಜ್ವಲ) ಆಗಿರಲಿ, ಬಡವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಸಂತೃಪ್ತಿಗೆ ಒತ್ತು ನೀಡಲಾಗಿದೆ, ಅಂದರೆ, ಪ್ರತಿ ಯೋಜನೆಯ 100% ರಷ್ಟು ಲಾಭ ಫಲಾನುಭವಿಗಳಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವುದು. ಉದಾಹರಣೆಗೆ, ಹಳ್ಳಿಗಳ 100% ವಿದ್ಯುದ್ದೀಕರಣ, ಮನೆಗಳ 100% ವಿದ್ಯುದ್ದೀಕರಣ, 100% ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ, 100% ಫಲಾನುಭವಿಗಳು ಉಚಿತ ಪಡಿತರವನ್ನು ಪಡೆಯುತ್ತಾರೆ. 

 

“8 ವರ್ಷಗಳು ಸೇವಾ, ಸುಶಾಸನ್, ಗರೀಬ್ ಕಲ್ಯಾಣ್” ಸರಣಿಯ ಮೂರನೇ ರಸಪ್ರಶ್ನೆಯ ವಿಷಯವಾಗಿದೆ

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಕಳೆದ 8 ವರ್ಷಗಳಲ್ಲಿ ಜನ ಕೇಂದ್ರಿತ ಆಡಳಿತದ ಕಡೆಗೆ ಮಾದರಿ ಬದಲಾವಣೆಯನ್ನು ಬೀರಿದೆ. 2014ರಿಂದೀಚೆಗೆ, ಗೌರವಾನ್ವಿತ ಪ್ರಧಾನಮಂತ್ರಿಯವರು ಹಲವಾರು ರಚನಾತ್ಮಕ ಬದಲಾವಣೆಗಳನ್ನು ಮಾಡಿದ್ದಾರೆ, ಇದು ನಮ್ಮ ಸಮಾಜ ಮತ್ತು ಆರ್ಥಿಕತೆಯ ಪ್ರತಿಯೊಂದು ವಲಯವನ್ನು ಒಳಗೊಳ್ಳುತ್ತದೆ:

  1. ಸುಗಮ ವ್ಯಾಪಾರ

  2. ಸುಗಮ ಜೀವನ

  3. ಯುವಜನತೆ ನೇತೃತ್ವದ ಅಭಿವೃದ್ಧಿ

  4. ಹೆಲ್ತ್ ಕೇರ್

  5. ಮೂಲಸೌಕರ್ಯ

  6. ನಾರಿ ಶಕ್ತಿ

  7. ರೈತ ಕಲ್ಯಾಣ

  8. ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿ ಗಮನ ಹರಿಸುವ ಜೊತೆಗೆ ರಾಷ್ಟ್ರೀಯ ಭದ್ರತೆ

  9. ಈಶಾನ್ಯ ಭಾರತವನ್ನು ಬಲಪಡಿಸುವುದು

  10. ಬಡವರು ಮತ್ತುಅಂಚಿನಲ್ಲಿರುವವರಿಗೆ ಸೇವೆ ಸಲ್ಲಿಸುವುದು

  11.  ಆರ್ಥಿಕತೆ ಮತ್ತು ಸುಧಾರಣೆಗಳು

  12. ತಂತ್ರಜ್ಞಾನ ಚಾಲಿತ ಭಾರತ

  13. ಪರಿಸರ ಮತ್ತು ಸುಸ್ಥಿರತೆ

  14. ಸಂಸ್ಕೃತಿ

ಈ 8 ವರ್ಷಗಳಲ್ಲಿ ಭಾರತವು ವಿಶ್ವದ ಅತ್ಯಂತ ಬಲವಾದ ಮತ್ತು ಸ್ಥಿತಿಸ್ಥಾಪಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತವು ತನ್ನ ಧ್ವನಿಯನ್ನು ಆಲಿಸುವ ಮತ್ತು ಗೌರವಿಸುವ ಸಮಾನ ಪಾಲುದಾರನಾಗಿ ನೋಡಲಾಗುವ ಸೂಪರ್ ಪವರ್ ಆಗುವ ಹಾದಿಯಲ್ಲಿ ಸ್ಥಿರವಾಗಿ ಸಾಗುತ್ತಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ನಿಜವಾಗಿಯೂ ಭಾರತದ ಸಾಮರ್ಥ್ಯವನ್ನು ಅನ್ಲಾಕ್ ಮಾಡುತ್ತಿದೆ ಮತ್ತು ತನ್ನ ನಾಗರಿಕರಿಗೆ ಪ್ರಥಮ ದರ್ಜೆಯ ರಾಷ್ಟ್ರವನ್ನು ಸೃಷ್ಟಿಸುತ್ತಿದೆ.

ಮಹಾಕ್ವಿಜ್ ನ ವಿಶಿಷ್ಟ ಲಕ್ಷಣಗಳು

ಮೈ-ಗೋವ್ ಸಾತಿಸ್/ಬಳಕೆದಾರರು ತಮ್ಮ ಆಯ್ಕೆಯ ಯಾವುದೇ ರಾಜ್ಯದ ಆವೃತ್ತಿಯನ್ನು ಆಯ್ಕೆ ಮಾಡಿ ಆಡಬಹುದು. ರಸಪ್ರಶ್ನೆ ಪ್ರಶ್ನೆಗಳು ಈಗ ಯೋಜನೆ ಮತ್ತು ಆ ನಿರ್ದಿಷ್ಟ ರಾಜ್ಯಕ್ಕೆ ಸಂಬಂಧಿಸಿವೆ. ಈ ರಸಪ್ರಶ್ನೆ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳು ಸೇರಿದಂತೆ ಅನೇಕ ಭಾಷೆಗಳಲ್ಲಿ ಲಭ್ಯವಿರುತ್ತದೆ.

Terms and Conditions

1. ಈ ರಸಪ್ರಶ್ನೆಯು ಸಬ್ಕಾ ವಿಕಾಸ್ ಮಹಾಕ್ವಿಜ್ ಸರಣಿಯ ಒಂದು ಭಾಗವಾಗಿದ್ದು, ಇದರಲ್ಲಿ ವಿವಿಧ ವಿಷಯಗಳ ಮೇಲೆ ವಿವಿಧ ರಸಪ್ರಶ್ನೆಗಳನ್ನು ಪ್ರಾರಂಭಿಸಲಾಗುವುದು

2. ರಸಪ್ರಶ್ನೆಯನ್ನು 30 ಮೇ 2022 ರಂದು ಪ್ರಾರಂಭಿಸಲಾಗುವುದು ಮತ್ತು 30 ಜೂನ್ 2022, 11:30 pm (IST) ವರೆಗೆ ಲೈವ್ ಆಗಿರುತ್ತದೆ.

3. ರಸಪ್ರಶ್ನೆಗೆ ಪ್ರವೇಶವು ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.

4. ಇದು ಒಂದು ಸಮಯಾಧಾರಿತ ರಸಪ್ರಶ್ನೆಯಾಗಿದ್ದು 10 ಪ್ರಶ್ನೆಗಳನ್ನು 200 ಸೆಕೆಂಡುಗಳಲ್ಲಿ ಉತ್ತರಿಸಬೇಕು. ಇದು ಬಹು ಭಾಷೆಗಳಲ್ಲಿ ಲಭ್ಯವಿರುವ ರಾಜ್ಯ ನಿರ್ದಿಷ್ಟ ರಸಪ್ರಶ್ನೆಯಾಗಿದೆ. ಒಬ್ಬ ವ್ಯಕ್ತಿಯು ಅನೇಕ ರಸಪ್ರಶ್ನೆಗಳಲ್ಲಿ ಭಾಗವಹಿಸಬಹುದು.

5. ರಸಪ್ರಶ್ನೆಯು 12 ಭಾಷೆಗಳಲ್ಲಿ ಲಭ್ಯವಿರುತ್ತದೆಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು

6. ಪ್ರತಿ ವಾರ, ಗರಿಷ್ಠ 1,000 ಹೆಚ್ಚು ಅಂಕ ಗಳಿಸಿದ ಸ್ಪರ್ಧಿಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಪ್ರತಿಯೊಬ್ಬ ವಿಜೇತರಿಗೆ 2,000/- ಗಳನ್ನು ನೀಡಲಾಗುವುದು

7. ಗರಿಷ್ಠ ಸಂಖ್ಯೆಯಲ್ಲಿ ಸರಿಯಾದ ಉತ್ತರಗಳನ್ನು ನೀಡಿದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ, ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳ ಸಂಖ್ಯೆ 1,000 ಮೀರಿದರೆ ಉಳಿದ ವಿಜೇತರನ್ನು ರಸಪ್ರಶ್ನೆ ಪೂರ್ಣಗೊಳಿಸಲು ತೆಗೆದುಕೊಂಡ ಸಮಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಉದಾಹರಣೆಗೆ, ರಸಪ್ರಶ್ನೆ ಫಲಿತಾಂಶಗಳು ಕೆಳಗಿನಂತಿದ್ದರೆ

ಅಭ್ಯರ್ಥಿಗಳ ಸಂಖ್ಯೆ 

ಅಂಕ 

ಸ್ಥಾನ 

500 

20 ರಲ್ಲಿ 20 

ಅವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ರೂ.2000 ಪಡೆಯುತ್ತಾರೆ 

400

20 ರಲ್ಲಿ 19

ಅವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ರೂ.2000 ಪಡೆಯುತ್ತಾರೆ

400

20 ರಲ್ಲಿ 18

ಈಗ ಒಟ್ಟು ವಿಜೇತರು 1000ಕ್ಕಿಂತ ಹೆಚ್ಚಾಗಿರುವ ಕಾರಣ, ಬಹುಮಾನದ ಹಣವನ್ನು ಪಡೆಯಲು ಕೇವಲ 100 ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಹಾಗಾಗಿ, 100 ಅಭ್ಯರ್ಥಿಗಳನ್ನು ಕನಿಷ್ಠ ಸಮಯ ತೆಗೆದುಕೊಂಡ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

8. ಒಬ್ಬ ಅಭ್ಯರ್ಥಿಯು ನಿರ್ದಿಷ್ಟ ರಸಪ್ರಶ್ನೆಯಲ್ಲಿ ಒಮ್ಮೆ ಮಾತ್ರ ಗೆಲ್ಲಲು ಅರ್ಹರಾಗಿರುತ್ತಾರೆಒಂದೇ ರಸಪ್ರಶ್ನೆಗೆ ಒಂದೇ ಅಭ್ಯರ್ಥಿಯಿಂದ  ಬಹು ನಮೂದುಗಳಿದ್ದರೆ  ಬಹು ಗೆಲುವುಗಳಿಗೆ ಅರ್ಹತೆ ಪಡೆಯುವುದಿಲ್ಲ. ಆದಾಗ್ಯೂ, ಅಭ್ಯರ್ಥಿಗಳು ಮಹಾವಿಕಾಸ್ ರಸಪ್ರಶ್ನೆ ಸರಣಿಯ ವಿಭಿನ್ನ ರಸಪ್ರಶ್ನೆಯಲ್ಲಿ ಗೆಲ್ಲಲು ಅರ್ಹರಾಗಿರುತ್ತಾರೆ

9. ನಿಮ್ಮ ಸಂಪರ್ಕ ವಿವರಗಳನ್ನು ಸಲ್ಲಿಸುವ ಮೂಲಕ, ರಸಪ್ರಶ್ನೆಯ ಉದ್ದೇಶಕ್ಕಾಗಿ ಮತ್ತು ಪ್ರಚಾರದ ವಿಷಯವನ್ನು ಸ್ವೀಕರಿಸಲು ಬಳಸಲಾಗುವ ವಿವರಗಳಿಗೆ ನೀವು ಸಮ್ಮತಿಯನ್ನು ನೀಡುತ್ತೀರಿ.

10. ಘೋಷಿತ ವಿಜೇತರು ಬಹುಮಾನದ ಹಣದ ವಿತರಣೆಗಾಗಿ ತಮ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಬಹುಮಾನದ ಹಣದ ವಿತರಣೆಗಾಗಿ ಬಳಕೆದಾರರ ಹೆಸರು ಬ್ಯಾಂಕ್ ಖಾತೆಯಲ್ಲಿರುವ ಹೆಸರಿನೊಂದಿಗೆ ಹೊಂದಿಕೆಯಾಗಬೇಕು.

11. ಒಂದು ಸ್ವಯಂಚಾಲಿತ ಪ್ರಕ್ರಿಯೆಯ ಮೂಲಕ ಪ್ರಶ್ನೆ ಬ್ಯಾಂಕ್‌ನಿಂದ ಯಾದೃಚ್ಛಿಕವಾಗಿ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗುತ್ತದೆ

12. ಕಠಿಣ ಪ್ರಶ್ನೆಯನ್ನು ಬಿಟ್ಟುಬಿಡಬಹುದು ಮತ್ತು ನಂತರ ಅದಕ್ಕೆ ಹಿಂತಿರುಗಬಹುದು.

13. ಯಾವುದೇ ಋಣಾತ್ಮಕ ಮಾರ್ಕಿಂಗ್ ಇರುವುದಿಲ್ಲ

14. ಅಭ್ಯರ್ಥಿಗಳು ಸ್ಟಾರ್ಟ್ ಕ್ವಿಜ್ ಬಟನ್ ಕ್ಲಿಕ್ ಮಾಡಿದ ತಕ್ಷಣ ರಸಪ್ರಶ್ನೆ ಪ್ರಾರಂಭವಾಗುತ್ತದೆ

15. ರಸಪ್ರಶ್ನೆಗೆ ಪ್ರವೇಶವು ಭಾರತದ ನಿವಾಸಿಗಳು ಅಥವಾ ಭಾರತೀಯ ಮೂಲದ ಎಲ್ಲಾ ಪ್ರವೇಶಕರಿಗೆ ಮುಕ್ತವಾಗಿದೆ.

16. ಅನುಚಿತವಾಗಿ ಸಮಂಜಸವಾದ ಸಮಯದಲ್ಲಿ ರಸಪ್ರಶ್ನೆಯನ್ನು ಪೂರ್ಣಗೊಳಿಸಲು ಅಭ್ಯರ್ಥಿಗಳು ಅನ್ಯಾಯದ ವಿಧಾನಗಳನ್ನು ಬಳಸಿದ್ದಾರೆ ಎಂದು ಪತ್ತೆಯಾದಲ್ಲಿ, ಪ್ರವೇಶವನ್ನು ತಿರಸ್ಕರಿಸಬಹುದು

17. ಕಳೆದುಹೋದ, ತಡವಾದ ಅಥವಾ ಅಪೂರ್ಣವಾಗಿರುವ ಅಥವಾ ಕಂಪ್ಯೂಟರ್ ದೋಷ ಅಥವಾ ಸಂಘಟಕರ ಸಮಂಜಸವಾದ ನಿಯಂತ್ರಣವನ್ನು ಮೀರಿದ ಯಾವುದೇ ಇತರ ದೋಷದ ಕಾರಣದಿಂದಾಗಿ ರವಾನೆಯಾಗದ ನಮೂದುಗಳಿಗೆ ಸಂಘಟಕರು ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ಪ್ರವೇಶದ ಸಲ್ಲಿಕೆಯ ಪುರಾವೆಯು ಅದೇ ರಶೀದಿಯ ಪುರಾವೆಯಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

18. ಅನಿರೀಕ್ಷಿತ ಸಂದರ್ಭಗಳ ಸನ್ನಿವೇಶದಲ್ಲಿ, ಯಾವುದೇ ಸಮಯದಲ್ಲಿ ರಸಪ್ರಶ್ನೆಯನ್ನು ತಿದ್ದುಪಡಿ ಮಾಡುವ ಅಥವಾ ಹಿಂತೆಗೆದುಕೊಳ್ಳುವ ಹಕ್ಕನ್ನು ಸಂಘಟಕರು ಕಾಯ್ದಿರಿಸುತ್ತಾರೆ. ಸಂದೇಹವನ್ನು ತಪ್ಪಿಸಲು ಇದು ನಿಯಮಗಳು ಮತ್ತು ಷರತ್ತುಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಒಳಗೊಂಡಿದೆ.

19. ಅಭ್ಯರ್ಥಿಗಳು ಕಾಲಕಾಲಕ್ಕೆ ರಸಪ್ರಶ್ನೆಯಲ್ಲಿ ಭಾಗವಹಿಸುವ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರಬೇಕು.

20. ರಸಪ್ರಶ್ನೆ ಅಥವಾ ಕ್ವಿಜ್‌ನ ಸಂಘಟಕರು ಅಥವಾ ಪಾಲುದಾರರಿಗೆ ಹಾನಿಕರವಾದ ಯಾವುದೇ ಅಭ್ಯರ್ಥಿಗಳ ಭಾಗವಹಿಸುವಿಕೆ ಅಥವಾ ಸಹಭಾಗಿತ್ವವನ್ನು ಅವರು ಭಾವಿಸಿದರೆ ಯಾವುದೇ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಅಥವಾ ಭಾಗವಹಿಸುವಿಕೆಯನ್ನು ನಿರಾಕರಿಸಲು ಸಂಘಟಕರು ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸುತ್ತಾರೆ. ಸಂಘಟಕರು ಸ್ವೀಕರಿಸಿದ ಮಾಹಿತಿಯು ಅಸ್ಪಷ್ಟ, ಅಪೂರ್ಣ, ಹಾನಿಗೊಳಗಾದ, ಸುಳ್ಳು ಅಥವಾ ತಪ್ಪಾಗಿದ್ದರೆ ನೋಂದಣಿಗಳು ಅನೂರ್ಜಿತವಾಗಿರುತ್ತವೆ.

21. MyGov ಉದ್ಯೋಗಿಗಳು ಮತ್ತು ಅವರ ಸಂಬಂಧಿಕರು ರಸಪ್ರಶ್ನೆಯಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಗಿದೆ.

22. ರಸಪ್ರಶ್ನೆಯಲ್ಲಿ ಸಂಘಟಕರ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರವ್ಯವಹಾರವನ್ನು ನಮೂದಿಸಲಾಗುವುದಿಲ್ಲ.

23. ರಸಪ್ರಶ್ನೆಯನ್ನು ನಮೂದಿಸುವ ಮೂಲಕ, ಪ್ರವೇಶದಾರನು ಮೇಲೆ ತಿಳಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧನಾಗಿರಲು ಸ್ವೀಕರಿಸುತ್ತಾನೆ ಮತ್ತು ಒಪ್ಪಿಕೊಳ್ಳುತ್ತಾನೆ

24. ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ನ್ಯಾಯಾಂಗದ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ.

25.  ಅನುವಾದಿಸಿದ ಡಾಕ್ಯುಮೆಂಟ್ನಲ್ಲಿ ಯಾವುದೇ ರೀತಿಯಸ್ಪಷ್ಟನೆ ಬೇಕಾದಲ್ಲಿ, ಅದನ್ನು contests@mygov.in ರವರಿಗೆ ತಿಳಿಸಬಹುದು ಮತ್ತುಹಿಂದಿ/ಇಂಗ್ಲೀಷ್ನಲ್ಲಿಇರುವವಿಷಯವನ್ನುಉಲ್ಲೇಖಿಸಬಹುದು.