GOVERNMENT OF INDIA
Accessibility
Accessibility Tools
Color Adjustment
Text Size
Navigation Adjustment
Screen Reader iconScreen Reader

Viksit Bharat Young Leaders Dialogue 2027 Quiz (Kannada)

Start Date : 21 Aug 2026, 10:00 am
End Date : 30 Sep 2026, 11:45 pm
Closed
Quiz Banner
  • 20 Questions
  • 600 Seconds
Login with MyGov AUTH to Play Quiz

About Quiz

Ministry of Youth Affairs and Sports, MyBharat ಸಂಸ್ಥೆಯು MyGov ಸಹಯೋಗದೊಂದಿಗೆViksit Bharat Young Leaders Dialogue 2027 Quiz’ ಅನ್ನು ಆಯೋಜಿಸಿದೆ. MyGov ಪೋರ್ಟಲ್‌ನಲ್ಲಿ ನಡೆಯುತ್ತಿರುವ ರಸಪ್ರಶ್ನೆಯು Viksit Bharat Young Leaders Dialogue (VBYLD) 2027 ಮೂಲಕ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯನ್ನು ತೊಡಗಿಸಿಕೊಳ್ಳುವ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ. ರಸಪ್ರಶ್ನೆಯು ದೇಶದ ವಿವಿಧ ಆಯಾಮಗಳು ಮತ್ತುViksit Bharat’ ದೃಷ್ಟಿಕೋನದ ಕುರಿತು ಜ್ಞಾನವನ್ನು ಪರೀಕ್ಷಿಸುತ್ತದೆ. ಯುವಜನರಲ್ಲಿ ಕುತೂಹಲ ಮೂಡಿಸುವುದು, ಮಾಹಿತಿಪೂರ್ಣ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ಪ್ರಾತಿನಿಧ್ಯವನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ವಿಜೇತರು ಮುಂದಿನ ಹಂತಗಳಿಗೆ (ಪ್ರಬಂಧ, ಪ್ರಸ್ತುತಿ ಇತ್ಯಾದಿ) ಮುನ್ನಡೆಯುವ ಅವಕಾಶ ಪಡೆಯುತ್ತಾರೆ, ಅಲ್ಲಿ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು, ನಾಯಕತ್ವ ಪ್ರದರ್ಶಿಸಬಹುದು ಮತ್ತು Viksit Bharat @2047 ಗುರಿಗೆ ಮಹತ್ವದ ಕೊಡುಗೆ ನೀಡಬಹುದು.

Terms and Conditions

  1. ರಸಪ್ರಶ್ನೆಯು ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.
  2. ರಸಪ್ರಶ್ನೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ.
  3. ಭಾಗವಹಿಸುವವರುPlay Quiz’ ಬಟನ್ ಕ್ಲಿಕ್ ಮಾಡಿದ ತಕ್ಷಣ ರಸಪ್ರಶ್ನೆ ಪ್ರಾರಂಭವಾಗುತ್ತದೆ.
  4. ರಸಪ್ರಶ್ನೆಯು ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ; ಪ್ರತಿಯೊಂದು ಪ್ರಶ್ನೆಗೆ 4 ಆಯ್ಕೆಗಳಿದ್ದು, ಕೇವಲ ಒಂದು ಸರಿಯಾದ ಉತ್ತರವಿರುತ್ತದೆ.
  5. ವಿಜೇತರ ಪಟ್ಟಿಗೆ ಅರ್ಹತೆ ಪಡೆಯಲು ಭಾಗವಹಿಸುವವರ MyGov Profile ನಿಖರ ಮತ್ತು ಸಂಪೂರ್ಣವಾಗಿರಬೇಕು.
  6. ಪ್ರತಿಯೊಬ್ಬ ಸ್ಪರ್ಧಿಯು ಒಮ್ಮೆ ಮಾತ್ರ ರಸಪ್ರಶ್ನೆಯನ್ನು ತೆಗೆದುಕೊಳ್ಳಬಹುದು. ಒಬ್ಬರೇ ಸ್ಪರ್ಧಿ ಒಂದಕ್ಕಿಂತ ಹೆಚ್ಚು ಬಾರಿ ಭಾಗವಹಿಸಿದ್ದು ಕಂಡುಬಂದರೆ, ಅವರನ್ನು ಅನರ್ಹಗೊಳಿಸಲಾಗುತ್ತದೆ.
  7. ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಕಂಪ್ಯೂಟರ್ ಆಧಾರಿತ ಯಾದೃಚ್ಛಿಕ (Randomization) ವಿಧಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಅರ್ಹ ಸ್ಪರ್ಧಿಗಳನ್ನು ಕೇಂದ್ರೀಯ ಪೂಲ್‌ನಲ್ಲಿ ಸೇರಿಸಲಾಗುವುದು ಮತ್ತು ಅಲ್ಲಿಂದ ಸ್ವಯಂಚಾಲಿತವಾಗಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
  8. ರಸಪ್ರಶ್ನೆಯನ್ನು MyGov ಹೋಸ್ಟ್ ಮಾಡಿದ್ದು, ಇದು https://quiz.mygov.in/ ನಲ್ಲಿ ಲಭ್ಯವಿದೆ.
  9. ಕಂಪ್ಯೂಟರ್ ದೋಷ ಅಥವಾ ಆಯೋಜಕರ ನಿಯಂತ್ರಣಕ್ಕೆ ಮೀರಿದ ಯಾವುದೇ ತಾಂತ್ರಿಕ ಕಾರಣಗಳಿಂದ ಕಳೆದುಹೋದ, ವಿಳಂಬವಾದ ಅಥವಾ ಅಪೂರ್ಣವಾದ ನಮೂದುಗಳಿಗೆ ಆಯೋಜಕರು ಜವಾಬ್ದಾರರಾಗಿರುವುದಿಲ್ಲ.
  10. ಉತ್ತರವನ್ನು ಸಲ್ಲಿಕೆ (Submit) ಮಾಡಿರುವ ಪುರಾವೆಯು ರಶೀದಿಯನ್ನು ಯಶಸ್ವಿಯಾಗಿ ಸ್ವೀಕರಿಸಲಾಗಿದೆ ಎಂಬುದರ ಅಂತಿಮ ಪುರಾವೆಯಾಗುವುದಿಲ್ಲ.
  11. ರಸಪ್ರಶ್ನೆಯ ಸಮಯದಲ್ಲಿ ಯಾವುದೇ ಅಕ್ರಮ ಮಾರ್ಗಗಳು (ಉದಾಹರಣೆಗೆ ಅನ್ಯ ವ್ಯಕ್ತಿಯ ಹೆಸರಿನಲ್ಲಿ ಭಾಗವಹಿಸುವುದು ಅಥವಾ ಬಹು ನಮೂದುಗಳು) ಕಂಡುಬಂದಲ್ಲಿ ಪ್ರವೇಶವನ್ನು ರದ್ದುಪಡಿಸಿ ಅಸಿಂಧುಗೊಳಿಸಲಾಗುತ್ತದೆ.
  12. ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಹಕ್ಕು ಆಯೋಜಕರಿಗೆ ಇರುತ್ತದೆ. ಆಯೋಜಕರ ನಿರ್ಧಾರವೇ ಅಂತಿಮ ಮತ್ತು ಬದ್ಧವಾಗಿರುತ್ತದೆ, ಹಾಗೂ ಯಾವುದೇ ಪತ್ರವ್ಯವಹಾರವನ್ನು ಸ್ವೀಕರಿಸಲಾಗುವುದಿಲ್ಲ.
  13. ಅನಿರೀಕ್ಷಿತ ಸಂದರ್ಭಗಳಲ್ಲಿ ಯಾವುದೇ ಕ್ಷಣದಲ್ಲಿ ರಸಪ್ರಶ್ನೆಯನ್ನು ಬದಲಾಯಿಸುವ ಅಥವಾ ರದ್ದುಗೊಳಿಸುವ ಸಂಪೂರ್ಣ ಹಕ್ಕನ್ನು ಆಯೋಜಕರು ಹೊಂದಿರುತ್ತಾರೆ. ಇದು ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಅಧಿಕಾರವನ್ನೂ ಒಳಗೊಂಡಿರುತ್ತದೆ.
  14. ಭಾಗವಹಿಸುವ ಮೂಲಕ, ಸ್ಪರ್ಧಿಗಳು ರಸಪ್ರಶ್ನೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಲು ಒಪ್ಪುತ್ತಾರೆ.
  15. ವಿಜೇತರ ಹೆಸರನ್ನು blog.mygov.in ನಲ್ಲಿ ಪ್ರಕಟಿಸಲಾಗುತ್ತದೆ ಮತ್ತು ಕಾರ್ಯಕ್ರಮದ ಮುಂದಿನ ವಿವರಗಳನ್ನು ಅಧಿಕೃತ ಸಂವಹನ ಮೂಲಕ ವಿಜೇತರಿಗೆ ತಿಳಿಸಲಾಗುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳನ್ನು ತಿದ್ದುಪಡಿ ಮಾಡುವ ಅಥವಾ ಸೂಕ್ತವೆನಿಸಿದರೆ ಸ್ಪರ್ಧೆಯನ್ನು ರದ್ದುಗೊಳಿಸುವ ಹಕ್ಕನ್ನು ಆಯೋಜಕರು ಕಾಯ್ದಿರಿಸಿಕೊಂಡಿದ್ದಾರೆ.
  16. ಆಯೋಜಕರೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ರಸಪ್ರಶ್ನೆಯಲ್ಲಿ ಭಾಗವಹಿಸಲು ಅರ್ಹರಲ್ಲ.